



ಕಾರ್ಕಳ, ಅ.2: ನ.1ರಂದು ಬೆಂಗಳೂರಿನಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡು ಮಂಗಳವಾರ ಹುಟ್ಟೂರು ಕಾರ್ಕಳಕ್ಕೆ ಆಗಮಿಸಿದ ತರಂಗ ವಾರಪತ್ರಿಕೆ ಸಂಪಾದಕಿ, ಹಿರಿಯ ಪತ್ರಕರ್ತೆ ಡಾ ಯು.ಬಿ ರಾಜಲಕ್ಷ್ಮಿ ಅವರನ್ನು ಕಾರ್ಕಳಕ್ಕೆ ಆಗಮಿಸಿದ ವೇಳೆ ಪೌರ ನಾಗರಿಕರ ಪರವಾಗಿ ಕಾಬೆಟ್ಟು ಶಾಲೆಯ ಹಳೆ ವಿದ್ಯಾಾರ್ಥಿಗಳು, ಪುರಸಭೆ ಸದಸ್ಯರು, ನಾಗರಿಕರು ಅವರ ನಿವಾಸದ ಮುಂದೆ ಸ್ವಾಾಗತಿಸಿಲಾಯಿಯಿತು. ಆರಂಭದಲ್ಲಿ ಆರತಿ ಬೆಳಗಿ ಸ್ವಾಾಗತ ಕೋರಲಾಯಿತು. ಹಿರಿಯರಾದ ಗೋವಿಂದ ಅಡಿಗ, ಶಕುಂತಳಾ ದಂಪತಿಗಳು ಬರ ಮಾಡಿಕೊಂಡರು. ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಶೋಭಾ ದೇವಾಡಿಗ, ಯೊಗೀಶ್ ದೇವಾಡಿಗ, ನೀತಾ ಆಚಾರ್ಯ, ಸಂಧ್ಯಾಮಲ್ಯ, ನಾಮಿನೆಟ್ ಸದಸ್ಯ ಸಂತೋಷ್ ರಾವ್, ಅಶೋಕ್ ಸುವರ್ಣ,ಕಾಬೆಟ್ಟು ಶಾಲೆಯ ಹಳೆ ವಿದ್ಯಾಾರ್ಥಿ ಸಂಘದ ಪ್ರ. ಕಾರ್ಯದರ್ಶಿ ಹರೀಶ್ ಶೆಣೈ, ಬಿ. ರಾಜೇಂದ್ರ ಭಟ್, ಸದಸ್ಯರಾದ ವೈಕುಂಠ ಶೆಣೈ, ಕಮಲಾಕ್ಷ, ಗಿರೀಶ್ ಕುಡ್ವ, ಪ್ರೇಮಾನಂದ ಪೈ, ಬಿಜೆಪಿ ನಗರಾಧ್ಯಕ್ಷ ರವೀಂದ್ರ ಮೊಯಿಲಿ, ಪುರಸಭೆ ಮಾಜಿ ಸದಸ್ಯ ಪ್ರಕಾಶ್ ರಾವ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಸುಮಾ ರವಿಕಾಂತ್ ಕಾಮತ್, ನಿರಂನ ಜೈನ್. ಪೊಟೋಗ್ರಾಫರ್ ನಿರಂಜನ, ವಾಣಿ ಮೊದಲಾದವವರು ಪ್ರಶಸ್ತಿ ಪುರಸ್ಕೃತರನ್ನು ಸಮ್ಮಾಾನಿಸಿ, ಶುಭಹಾರೈಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.