



ಕಾರ್ಕಳ: ಬಸ್ ಹತ್ತುವ ವೇಳೆ ಕೈಜಾರಿ ರಸ್ತೆಗೆ ಬಿದ್ದು ವೃಧ್ಧ ಗಂಭೀರ ಗಾಯಗೊಂಡ ಘಟನೆ ಡಿ.4ರಂದು ಕಾರ್ಕಳ ತಾಲೂಕಿನ ಹಿರ್ಗಾನ ಬಸ್ ನಿಲ್ದಾಣ ಬಳಿ ನಡೆದಿದೆ. ಹಿರ್ಗಾನ ಚಿಕ್ಕಲ್ಬೆಟ್ಟಿನ ಕಣಿಲ ದ ಕೃಷ್ಣ ನಾಯಕ್ ಗಾಯಗೊಂಡವರು ಕೃಷ್ಣ ನಾಯಕ್ ಹಿರ್ಗಾನದಿಂದ ನೆಲ್ಲಿ ಕಟ್ಟೆ ಗೆ ಹೋಗಲು ಖಾಸಗಿ ಬಸ್ ಗೆ ಹತ್ತುತಿದ್ದ ಸಮಯದಲ್ಲಿ ಕೈ ಜಾರಿ ರಸ್ತೆಗೆ ಬಿದ್ದಿದ್ದು ಬಸ್ ನ ಹಿಂದಿನ ಚಕ್ರವು ಕಾಲಿನ ಮೇಲೆ ಸಾಗಿದೆ ಎನ್ನಲಾಗಿದ್ದು ಅಪಘಾತದ ತೀವ್ರತೆಗೆ ವಿಪರೀತ ರಕ್ತಸ್ರಾವ ವಾಗಿದ್ದ ಕಾರಣ ಗಂಭೀರ ಗಾಯಗೊಂಡಿದ್ದಾರೆ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.