logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ :ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮ

ಟ್ರೆಂಡಿಂಗ್
share whatsappshare facebookshare telegram
4 Feb 2022
post image

ಕಾರ್ಕಳ : ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯೂತ್ ರೆಡ್ ಕ್ರಾಸ್ ಹಾಗೂ ರೋವರ್ ಮತ್ತು ರೆಂಜಾರ್ಸ್ ವತಿಯಿಂದ ಫೆಬ್ರವರಿ 04ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ನಡೆಯಿತು.

ಕ್ಯಾನ್ಸರ್ ರೋಗಕ್ಕೆ ಅತಿ ಹೆಚ್ಚಾಗಿ ತಂಬಾಕು ಸೇವನೆ ಮಾಡುವವರೇ ಬಲಿಯಾಗುತ್ತಿದ್ದಾರೆಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಶಶಾಂಕ್ ಆರ್ ಕಟೀಲ್ ಮಾತನಾಡಿದರು. ಯುವ ಜನತೆಗೋಸ್ಕರ ಇಂತಹ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು, ಕ್ಯಾನ್ಸರ್ ಮುಕ್ತ ಭಾರತವನ್ನು ನಿರ್ಮಾಣ ಮಾಡಬೇಕೆಂದು ಕಾರ್ಯಕ್ರಮವನ್ನು ಉದ್ದೇಶಿಸಿ ಕಿರಣ್ ಬಾಬು ತಮ್ಮ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜ್ ಪ್ರಾಂಶುಪಾಲರಾದ ಶ್ರೀವರ್ಮಾ ಅಜ್ರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಿ ಆಸ್ಪತ್ರೆಯಲ್ಲಿನ ಉಚಿತ ಚಿಕಿತ್ಸೆಯ ಕುರಿತಾದ ಮಾಹಿತಿಯನ್ನು ಅರೋಗ್ಯ ಮಿತ್ರ ಸಂಚಾಲಕಿ ಶ್ರೀಮತಿ ಕೀರ್ತನ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜ್ ನ ವಿದ್ಯಾರ್ಥಿನಿ ವಿನುತಾ ಪೂಜಾರಿ ಪ್ರಾರ್ಥನೆ ಮಾಡಿದರು, ಕುಮಾರಿ ನಿತ್ಯ ಜೈನ ಸ್ವಾಗತಿಸಿದರು. ಯೂತ್ ರೆಡ್ ಕ್ರಾಸ್ ಸಂಚಾಲಕಿ , ಯುವ ಚೇತನ ರೆಂಜರ್ ಲೀಡರ್ ಪ್ರೋ ಸಂಧ್ಯಾ ಭಂಡಾರಿ, ರೋವರ್ ಲೀಡರ್ ಪ್ರೋ. ಕೃಷ್ಣಮೂರ್ತಿ ವೈದ್ಯ, ಸಹಾಯಕ ಪ್ರಾಧ್ಯಾಪಕರು ವಾಣಿಜ್ಯ ವಿಭಾಗ ಪ್ರೋ. ವಿದ್ಯಾಧರ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮವನ್ನು ವಂದಿಸಿದರು, ಸೃಜನ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಕಳ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.