



ಕಾರ್ಕಳ: ಕಥೊಲಿಕ್ ಸಭಾ ಕಣಜಾರ್ ಘಟಕದ ವತಿಯಿಂದ ನಿಮ೯ಲ ಪರಿಸರ ನಮ್ಮ ಕರ್ತವ್ಯ ಕಾಯ೯ಕ್ರಮವನ್ನು ಗಾಂಧಿ ಜಯಂತಿ ದಿನದಂದು ಆಚರಿಸಲಾಯಿತು. ಘಟಕ ಅಧ್ಯಕ್ಷ ವಿನ್ಸೆಂಟ್ ಡಿ'ಸೋಜಾ, ಕಥೊಲಿಕ್ ಸಭಾ ಕಾಕ೯ಳ ವಲಯ ನಿಕಟಪೂವ೯ ಅಧ್ಯಕ್ಷ ಪಳ್ಳಿ ರೋಬಟ್೯ ಮಿನೇಜಸ್ ಇವರು ಮುಂದಾಳತ್ವ ವಹಿಸಿದ್ದರು. ಕಾಯ೯ಕ್ರಮದಲ್ಲಿ ಕಣಜಾರು ಘಟಕದ- ಸ್ತ್ರೀ ಸಂಘಟನೆ, ನೀತಿ ಮತ್ತು ಶಾಂತಿ ಅಯೋಗ, ಶ್ರಮ ಅಯೋಗ ಹಾಗೂ ಜನಸಾಮಾನ್ಯರ ಅಯೋಗಗಳ ಸದಸ್ಯರು ಸಹಭಾಗಿಗಳಾಗಿದ್ದರು. ರಂಗನಪಲ್ಕೆಯಿಂದ ಹಿಡಿದು ಆಸುಪಾಸಿನ ರಸ್ತೆಯ ಅಕ್ಕಪಕ್ಕದಲ್ಲಿರುವ ಕಸ ಕಡ್ಡಿ ಹಾಗೂ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಘಟಕ ಕಾಯ೯ದಶಿ೯ ಪ್ರೀಯಾ ಆಯೋಗಗಳ ಸಂಯೋಜಕರಾದ ಕ್ಲಾರಾ ಮೇರಿ ಮಿನೇಜಸ್, ಮರಿಯಾ ಸಲ್ದಾನ, ವಿಲ್ಮಾ ಡಿ'ಸೋಜ ಮತ್ತು ಜೆ. ಬಿ. ಡಿ' ಸೋಜ ರವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.