logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಕಾರ್ಕಳ ಪಾತ್ರ ಮಹತ್ವ : ಸುನೀಲ್ ಕುಮಾರ್

ಟ್ರೆಂಡಿಂಗ್
share whatsappshare facebookshare telegram
15 Mar 2022
post image

ಕಾರ್ಕಳ: ಕರ್ನಾಟಕ ಏಕೀಕರಣದ ಹೊರಾಟದಲ್ಲಿ ಕಾರ್ಕಳದ ಜಿನರಾಜ ಹೆಗ್ಡೆಯವರು ಪ್ರಮುಖ ಪಾತ್ರ ವಹಿಸಿದರು. ಅವರ ಸ್ಮರಣಿಯೊಂದಿಗೆ ಹೊಸ ಪೀಳಿಗೆಗೆ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದೊಂದಿಗೆ ಅವರ ಹೆಸರನ್ನು ಕಾರ್ಕಳ ಉತ್ಸವದ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಯ ವೇದಿಕೆಗೆ ಇಡಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್‌ಕುಮಾರ್ ಹೇಳಿದರು.

ಕಾರ್ಕಳ ಉತ್ಸವ ಪ್ರಯುಕ್ತ ಅರಣ್ಯ ಪ್ರಾತ್ಯಕ್ಷಿಕೆ ಹಾಗೂ ವಸ್ತುಪ್ರದರ್ಶನ ಮಳಿಗೆ ಹಾಗೂ ಮಾರಾಟ ಮಳಿಗೆ ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಯೋಧನನ್ನು ಸ್ಮರಿಸಿತು ನಿಸರ್ಗಧಾಮ ಅವಿಭಜಿತ ಕಾರ್ಕಳದ ಗಡಿಯಂಚಿನ ಗ್ರಾಮವಾಗಿರುವ ನಾಡ್ಪಾಲಿನ ಉದಯ ಪೂಜಾರಿಯವರು ದೇಶದ ಯೋಧನಾಗಿ ಸೇವೆಸಲ್ಲಿಸಿ ದೇಶಕ್ಕಾಗಿ ವೀರಮರಣ ವೊಪ್ಪಿದ್ದರು. ಅವರು ನಿಸರ್ಗದೊಂದಿಗೆ ಹುಟ್ಟಿ ಬೆಳೆದು ಅವರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಅವರ ಹೆಸರನ್ನು ನಿಸರ್ಗಧಾಮಕ್ಕೆ ನಾಮಕರಣ ಮಾಡುವ ಮೂಲಕ ಅವರನ್ನು ಸ್ಮರಿಸಲಾಗುತ್ತಿದೆ ಎಂದರು. ಅರಣ್ಯವು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಅರಣ್ಯದ ಮಹತ್ವವನ್ನು ಈ ಪ್ರಾತ್ಯಕ್ಷಿಕೆ ತಿಳಿಸಿದೆ. ವಸ್ತು ಪ್ರದರ್ಶನದಲ್ಲಿ ಕಾದಿ ಮೇಳ,ಶಿಲ್ಪ ಕಲೆ, ಲಲಿತಾ ಕಲೆ ಸೇರಿದಂತೆ ವಿವಿಧ ಪ್ರದರ್ಶನ ಹಾಗೂ ಮಾರಾಟ ಮಳಿಗೆ ತೆರೆಯಲಾಗಿದೆ. ಮಾರ್ಚ್ ೧೭ರಂದು ಫಲಪುಷ್ಪ ಪ್ರದರ್ಶನ ಈ ಪರಿಸರೆದಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನು ಸಚಿವ ಸುನೀಲ್ ಕುಮಾರ್ ನೀಡಿದರು.

ಜಿನರಾಜ ಹೆಗ್ಡೆ ವೇದಿಕೆಯಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿನರಾಜ ಹೆಗ್ಡೆಯವರ ಮಗ ರೆಂಜಾಳ ಮಹಾವೀರ ಹೆಗ್ಡೆ ವಹಿಸಿ ಮಾತನಾಡಿ, ಕನ್ನಡ ನೆಲೆ-ಜಲ-ಬಾಷೆಯ ರಕ್ಷಣೆಯಲ್ಲಿ ಪ್ರಮುಖರಾದವರನ್ನು ಸಮಾಜ ಗುರುತಿಸಿ ಗೌರವಿಸಿಸುತ್ತಿರುವುದು ಕನ್ನಡಕ್ಕೆ ಸಂದ ಜಯವೆಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಮಾತನಾಡಿ, ಪುಸ್ತಕ ಮಾರಾಟ ಮಾಳಿಗೆಗಳ ಮೂಲಕ ಓದುವ ವರ್ಗವನ್ನು ಹೆಚ್ಚಿಸುತ್ತದೆ. ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿಯನ್ನು ಬೆಳೆಸಬೇಕೆಂದರು. ಮAಗಳೂರು ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆತಲ್ಕರ್ ಮಾತನಾಡಿ, ಮಾನವ ಜೀವನ ಮತ್ತು ಕಾಡಿನ ಸಂರಕ್ಷಣೆ ಜೊತೆಗೆ ಅರಣ್ಯದ ಅಂತರAಗವನ್ನು ಅನುಭವಿಸುವ ಸದ್ದುದ್ದೇಶದಿಮದ ಈ ಪ್ರಾತ್ಯಕ್ಷಿಕೆಯನ್ನು ಮಾಡಲಾಗಿದೆ. ವಿವಿಧ ವನಗಳು,ಜಲಪಾತಗಳು ಹಾಗೂ ಬದುಕಿನ ಚಿತ್ರಗಳನ್ನು ಇಲ್ಲಿ ಬಿಂಬಿಸಲಾಗಿದೆ. ಮಾನವನ ಬದುಕಿಗೆ ಅರಣ್ಯ ಸಂಪತ್ತು ಅಮೂಲ್ಯವೆಂದರು.

ಬೆಂಗಳೂರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರ, ಬೆಂಗಳೂರು ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅಕ್ಕಸಾಲಿ, ದಾವಣಗೆರೆ ರಂಗಾಯಣದ ನಿರ್ದೇಶಕ ಯಶವಂತ ಸರದೇಶ ಪಾಂಡೆ, ಉಡುಪಿ ಕೆನರಾ ಬ್ಯಾಂಕ್‌ನ ಕೇಂದ್ರೀಯ ಮುಖ್ಯಸ್ಥ ಎಸ್.ಕೆ.ಕಾಲಿ, ಕುಂದಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಖಾರಿ ಆಶೀಶ್ ಶೆಟ್ಟಿ, ಕುದುರೆಮುಖ ವನ್ಯಜೀವಿ ಉಪಸಂರಕ್ಷಣಾಧಿಕಾರಿ ರುದ್ರನ್ ಐಎಫ್, ಬೆಂಗಳೂರು ಕರ್ನಾಟಕ ಕರಕುಶಲ ನಿಗಮದ ನಿರ್ದೇಶಕಿ ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕಿ ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕಿ ಶಂಕರಿ ವಿದ್ಯಾರ್ಥಿಗಳಾದ ಶ್ರಾವರಿ, ಲಹರಿ ಪ್ರಕಾಶ್, ನೈತಿಕ್ ಶೆಟ್ಟಿ, ಶೈಯಲ್ ನಾಡಗೀತೆ ಹಾಡಿದರು. ಕರುಣಾಕರ ಕೋಟ್ಯಾನ್ ನಿರೂಪಿಸಿದರು. ರೇಷ್ಮಾ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಧನ್ಯವಾದವಿತ್ತರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.