



ತಿರುವನಂತಪುರಂ: ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ನಾಯಕ ಗು ಬಿ. ಕೃಷ್ಣಮೂರ್ತಿ ವಯನಾಡಿನ ಸುಲ್ತಾನ್ ಬತೇರಿಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಪಿಐ (ಮಾವೋವಾದಿ)ನ ಕಬನಿ ದಳಂ ಕಮಾಂಡರ್ ಸಾವಿತ್ರಿ ಅಲಿಯಾಸ್ ರೆಜಿತಾಳನ್ನೂ ಬಿ.ಜಿ.ಕೃಷ್ಣಮೂರ್ತಿಯ ಜೊತೆಗೆ ಬಂಧಿಸಲಾಗಿದೆ. ಜಿ.ಕೃಷ್ಣಮೂರ್ತಿ 2003 ರಿಂದ ಭೂಗತನಾಗಿದ್ದ, 2018ರಲ್ಲಿ ಅವರ ತಂದೆ ಗೋಪಾಲ ರಾವ್ ನಿಧನರಾದಾಗಲೂ ಅಂತ್ಯಕ್ರಿಯೆಯಲ್ಲಿ ಬಿ.ಜಿ.ಕೃಷ್ಣಮೂರ್ತಿ ಭಾಗಿಯಾಗಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಿ.ಜಿ.ಕೃಷ್ಣಮೂರ್ತಿ ವಿರುದ್ದ ಸುಮಾರು 53 ಪ್ರಕರಣಗಳಿದ್ದರೆ, ಸಾವಿತ್ರಿ ಮಾವೋವಾದಿ ನಾಯಕ ವಿಕ್ರಮ ಗೌಡನ ಪತ್ನಿಯಾಗಿದ್ದಳು. ಈತನೂ ವಯನಾಡ- ಕೋಝಿಕ್ಕೋಡ್ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಾವೋವಾದಿಗಳ ಕಬನಿ ದಳಂನಲ್ಲಿದ್ದಾನೆ. ಇಬ್ಬರು ಮಾವೋವಾದಿ ನಾಯಕರನ್ನು ಬಂಧಿಸಿರುವ ಕೇರಳ ಪೊಲೀಸರು ಇಬ್ಬರನ್ನೂ ಕೂಡ ಚಿಕ್ಕಮಗಳೂರು ಜಿಲ್ಲಾ ಪೊಲೀಸರ ವಶಕ್ಕೆ ಹಸ್ತಾಂತರ ಮಾಡುವ ಸಾಧ್ಯತೆಯಿದೆ.
ಕೃಷ್ಣಮೂರ್ತಿ ಶೃಂಗೇರಿ ತಾಲೂಕು ಭುವನಹಡ್ಲು ಗ್ರಾಮದವನು. ಶಿವಮೊಗ್ಗದಲ್ಲಿ ನ್ಯಾಯಾಂಗ ಪದವಿ ಪಡೆದಿದ್ದ ಈತ, ಅಲ್ಲಿಯೇ ಸಾಕಷ್ಟುಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ. ಬಳಿಕ ಪಶ್ಚಿಮ ಘಟ್ಟ ಉಳಿಸಿ ಹೋರಾಟ, ಕುದುರೆಮುಖ ಉಳಿಸಿ ಮೊದಲಾದ ಹೋರಾಟಗಳ ಮೂಲಕ ಪ್ರವರ್ಧಮಾನಕ್ಕೆ ಬಂದು ಬಳಿಕ ಇದ್ದಕ್ಕಿದ್ದಂತೆ ನಕ್ಸಲ್ ವಲಯದಲ್ಲಿ ಕಾಣಿಸಿಕೊಂಡಿದ್ದ. ಬಳಿಕ ಕರ್ನಾಟಕದಲ್ಲಿ ನಕ್ಸಲ್ ಚಳವಳಿಯನ್ನು ಕಾಯ್ದಿಡುವಲ್ಲಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಹೊಸಗದ್ದೆ ಮೂಲದ ಪ್ರಭಾ ಎಂಬ ನಕ್ಸಲ್ ಕಾರ್ಯಕರ್ತೆಯನ್ನು ವಿವಾಹವಾಗಿದ್ದ ಈತ, ಕರ್ನಾಟಕ ಭಾಗದಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆಯಾದ ಬಳಿಕ ಕೇರಳದತ್ತ ಮುಖ ಮಾಡಿದ್ದ. ಈತನ ವಿರುದ್ಧ ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹತ್ಯೆ ಸೇರಿದಂತೆ 50 ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.