logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ ಕರ್ನಾಟಕ ಮೊದಲ ರಾಜ್ಯ : ವೀರಪ್ಪ ಮೊಯ್ಲಿ

ಟ್ರೆಂಡಿಂಗ್
share whatsappshare facebookshare telegram
24 Sept 2023
post image

ಕಾರ್ಕಳ: ಮಹಿಳೆಯರಿಗೆ  ಮೀಸಲಾತಿ ನೀಡುವಲ್ಲಿ  ಕರ್ನಾಟಕ  ಮೊದಲ ರಾಜ್ಯವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ  ಡಾ. ಎಂ. ವೀರಪ್ಪ ಮೊಯಿಲಿ ಹೇಳಿದರು ಅವರು ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ  ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ  ಮಾತನಾಡಿದರು.

1993 ರಲ್ಲಿಯೆ ಮಹಿಳೆಯರಿಗೆ ಮೀಸಲಾತಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ನಲ್ಲಿ 50% ಮೀಸಲಾತಿ ಯನ್ನು ಕಾಂಗ್ರೆಸ್ ಪಕ್ಷ  ಜಾರಿಗೆ ತಂದಿತ್ತು .  ಅಂದಿನ ಪಂಚಾಯತ್ ಚುನಾವಣೆಯಲ್ಲಿ 52% ದಷ್ಟು ಮಹಿಳೆಯರು ಚುನಾವಣೆಯಲ್ಲಿ ಅಯ್ಕೆಯಾಗಿದ್ದರು.   .

ಬಿಜೆಪಿ ಪಕ್ಷ ದರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ.  2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಾತಿಗಳ  ನಡುವೆ ಸಂಘರ್ಷ ಕ್ಕೆ ಕಾರಣವಾಗಬಹುದು ಕಾಂಗ್ರೆಸ್‌ ಪಕ್ಷದ ವಿಜಯೋತ್ಸವ ಕಂಡು   ಜೆಡಿಎಸ್ ಬಿಜೆಪಿ ಕಾಲು ಹಿಡಿದು ಸಖ್ಯ ಬೆಳೆಸಿದೆ ಎಂದು ಹೇಳಿದರು.ಬಿಜೆಪಿ ಪ್ರಚೋದನಕಾರಿ ಭಾಷಣಕ್ಕೆ ಸೀಮಿತ ವಾಗಿಸುತ್ತಿದೆ. 2024 ರ ಚುನಾವಣೆಯಲ್ಲಿ ಅಲ್ಪಸಂಖ್ಯಾತರು, ದಲಿತರು ಶೋಷಿತರ ಪರವಾಗಿರುವ ಪಕ್ಷವನ್ನು ಕೇಂದ್ರ ದಲ್ಲಿ ಜಾರಿಗೆ ತರಲು ಶ್ರಮಿಸಿ‌, ಎಂದರು

ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ ಸೋಲಿಸುವವರ  ಮನಪರಿವರ್ತಿಸಿ ಅವರನ್ನು ,  ಪಕ್ಷ ಕೊಟ್ಟ ಜವಾಬ್ದಾರಿಯನ್ನು  ನಿರ್ವಹಿಸಿ, ಅಧಿಕಾರ ಶಾಶ್ವತವಲ್ಲ ಅದರೆ ,ಉಸ್ತುವಾರಿ ಅವಧಿಯಲ್ಲಿ ನಿರ್ವಹಿಸಿದ ಕಾರ್ಯಗಳು ಶಾಶ್ವತ ವಾಗಬೇಕು ಎಂದರು.

ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲು ಮೂರು ವರ್ಷ ತಗುಲಿದ್ದು , ಅದರೆ ಕಾರ್ಕಳ ತಾಲೂಕಿನಲ್ಲಿ ಮಾತ್ರ ಅರು ತಿಂಗಳಲ್ಲಿ ಪರಶುರಾಮ ಮೂರ್ತಿ ನಿರ್ಮಾಣ ಮಾಡಿದ್ದಾರೆ ,ಅದರಲ್ಲಿ  ಜನರ ದಿಕ್ಕು ತಪ್ಪಿಸಿದ್ದಾರೆ . ಸತ್ಯಾಸತ್ಯತೆ ತಿಳಿದಿದೆ ಎಂದರು.

ಒಂದು ಕೋಟಿ ಎಂಟು‌ಲಕ್ಷ  ಗೃಹ ಲಕ್ಷ್ಮಿ ಯೊಜನೆಯು ಫಲಾನುಭವಿಗಳಿಗೆ ತಲುಪಿದೆ. ಎಂಟು ಲಕ್ಷ ಖಾತೆಗಳಿಗೆ ಅಧಾರ್ ಸೀಡಿಂಗ್ ಹಾಗೂ ಮಹಿಳೆಯರ ಖಾತೆಗಳು ಸ್ಥಗಿತಹೊಂಡ ಕಾರಣ ಹಣ ಇನ್ನೂ ಹೋಗಿಲ್ಲ , ರಾಜ್ಯ ಸರಕಾರವು  34000 ಕೋಟಿ ಹಣವನ್ನು ನೇರವಾಗಿ ಮಹಿಳೆಯರಿಗೆ   ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದರು .

ಕಾಂಗ್ರೆಸ್ ಮುಖಂಡ  ಉದಯ ಶೆಟ್ಟಿ ಮುನಿಯಾಲು  ಮಾತನಾಡಿ ಬಿಜೆಪಿ ಪಕ್ಷದ ದುರಾಡಳಿತವನ್ನು ಕೊನೆಗಾಣಿಸಿಬೇಕಾಗಿದೆ. ಪಕ್ಷದ ಕಾರ್ಯಕರ್ತರು ನಮ್ಮ ಜೀವಾಳ , ಅವರ ಸಹಕಾರದಿಂದಲೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಸೆಪ್ಟೆಂಬರ್ ಕೊನೆ ವಾರದಲ್ಲಿ ಕೈ ಕಾರ್ಯಕರ್ತರು ಮನೆಮನೆಗೆ ತೆರಳಿ ಸರಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಕಾರ್ಯಪ್ರವೃತ್ತರಾಗಬೇಕು.ಮುಂದಿನ ದಿನಗಳಲ್ಲಿ ನಡೆಯುವ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳನ್ನು ಎದುರಿಸಲು ಸಿದ್ದರಾಗಬೇಕು ಎಂದು ಕಾರ್ಯಕರ್ತರಿಗೆ ಕರೆನೀಡಿದರು.‌

ಕೆಪಿ ಸಿಸಿ ಪ್ರಧಾನ ಕಾರ್ಯದರ್ಶಿ ಮಮತಾಗಟ್ಟಿ ಮಾತನಾಡಿ ಪಕ್ಷದ ಕಾರ್ಯಕರ್ತರು ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ , ಬಿಜೆಪಿ ಧರ್ಮವನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ ಎಂದರು.

ಕಾಂಗ್ರೇಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು , ಸುಧೀರ್ ಮರೋಳಿ  ಮಾತನಾಡಿ ದರು ರಾಜ್ಯ ಕೃಷಿ ಘಟಕ ಕಾರ್ಯದರ್ಶಿ ಉದಯ ವಿ. ಶೆಟ್ಟಿ ಕಾರ್ಯದರ್ಶಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ,  ಸುರೇಂದ್ರ ಶೆಟ್ಟಿ,ಹೆಬ್ರಿ  ಬ್ಲಾಕ್  ಮಾಜಿ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ವಕ್ತಾರರ ಬಿಪಿನಚಂದ್ರ ಪಾಲ್, ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್‌ ,ರಾಘವ ದೇವಾಡಿಗ,  ಜಿಲ್ಲಾ ಕಾಂಗ್ರೆಸ್ ಸದಸ್ಯ ಶಿರಿಯಣ್ಣ ಶೆಟ್ಟಿ ,ಸುಭೋದ್ ಶೆಟ್ಟಿ,ಇಂಟಕ್ ಅದ್ಯಕ್ಷ ಕಿರಣ್ ಹೆಗ್ಡೆ, ಡಾ: ಪ್ರೇಮ್ ದಾಸ್‌, ಜಿಲ್ಲಾ ಅಲ್ಪಸಂಖ್ಯಾತ ಸಮಿತಿ ಸದಸ್ಯಮೊಯಿದ್ದಿನಬ್ಬ ಇನ್ನಾ, ಆರೀಫ್ ಕಲ್ಲೊಟ್ಟೆ, ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷ ಗೀತಾ ವಾಗ್ಲೆ,ಜಿಲ್ಲಾ ಮಹಿಳಾ ಕಾಂಗ್ರೇಸ್ ಉಪಾಧ್ಯಕ್ಷೆ ಮಾಲಿನಿ ಎನ್. ರೈ, ಜಿಲ್ಲಾ ಯುವ ಕಾಂಗ್ರೆಸ್ ದೀಪಕ್ ಕೋಟ್ಯನ್ ,  ಮೊದಲಾದವರು ಉಪಸ್ಥಿತರಿದ್ದರು ಕಾರ್ಕಳ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ, ಕಾರ್ಕಳ ಕೆ. ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ .ಚಂದ್ರಶೇಖರ ಬಾಯರಿ,  ಕಾರ್ಕಳ ಕಾಂಗ್ರೆಸ್ ವಕ್ತಾರ  ಶುಭದರಾವ್ ಕಾರ್ಯಕ್ರಮ ನಿರೂಪಿಸಿದರು.

ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಮಡಿವಾಳ ಸ್ವಾಗತಿಸಿದರು ಸುಧಾಕರ ಧನ್ಯವಾದ ವಿತ್ತರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.