



ಕಾರವಾರ: ಕರ್ನಾಟಕ ಅರಣ್ಯ ಇಲಾಖೆ ಮತ್ತು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ ಅಧ್ಯಯನದ ಪ್ರಕಾರ ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ-ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿವೆ. ಇಲ್ಲಿ 730 ಸಿಂಗಳಿಕಗಳು 32 ಗುಂಪುಗಳಲ್ಲಿ ವಾಸಿಸುತ್ತಿವೆ .
ಹಿಂದಿನ ಅಧ್ಯಯನಕ್ಕೆ ಹೋಲಿಸಿದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ವ್ಯಾಪಿಸಿರುವ ಶರಾವತಿ ಕಣಿವೆ ಪ್ರದೇಶದಲ್ಲಿ ಈ ಜಾತಿಯ ಸಿಂಗಳಿಕಗಳಿದ್ದು, ಇವುಗಳ ಸಂರಕ್ಷಣೆಗೆ ಅಧ್ಯಯನದಿಂದ ದೊಡ್ಡ ಉತ್ತೇಜನ ಸಿಕ್ಕಿದಂತಾಗಿದೆ. 2015ರಲ್ಲಿ ಮಾಡಲಾದ ಅಧ್ಯಯನ ಪ್ರಕಾರ 600 ಸಿಂಗಳಿಕಗಳು 30 ಗುಂಪುಗಳಲ್ಲಿ ವಾಸಿಸುತ್ತಿದ್ದವು.
ಶಿರಸಿ ಅರಣ್ಯ ವಿಭಾಗದ ಕ್ಯಾದಗಿ ಮತ್ತು ಸಿದ್ದಾಪುರ ಅರಣ್ಯ ವ್ಯಾಪ್ತಿ ಮತ್ತು ಹೊನ್ನಾವರ ಅರಣ್ಯ ವಿಭಾಗದಲ್ಲಿ ಹೊನ್ನಾವರ, ಗೇರುಸೊಪ್ಪ, ಭಟ್ಕಳ ಮತ್ತು ಕುಮಟಾ ಅರಣ್ಯ ವ್ಯಾಪ್ತಿ ಹಾಗೂ ಶಿವಮೊಗ್ಗ ವನ್ಯಜೀವಿ ವಿಭಾಗದ ಕೊಗಾರ್ ಮತ್ತು ಕಾರ್ಗಲ್ ಅರಣ್ಯ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಾಗಿದೆ ಎಂದು ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.