



ಅಪರಾಧ ಪ್ರಕರಣಗಳ ಆರೋಪದಿಂದ ಖುಲಾಸೆಯಾಗಿದ್ದರೂ ರೌಡಿ ಶೀಟ್ ಆರಂಭಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ರೌಡಿಯಾಗಿದ್ದರೆ ಅವರು ಮುಂದೆಯೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ, ಖುಲಾಸೆಯಾಗಿದ್ದಾರೆ ಎಂಬ ಮಾತ್ರಕ್ಕೆ ರೌಡಿಶೀಟ್‌ನಿಂದ ಹೆಸರು ತೆಗೆಯುವಂತಿಲ್ಲ. ಇನ್ನೂ ಖುಲಾಸೆಯಾಗಿದ್ದರೂ ರೌಡಿಶೀಟ್ ತೆಗೆಯಬಹುದು. ಎಂದು ಹೈಕೋರ್ಟ್ ಹೇಳಿದೆ.. ಹೊಸ ಮಾರ್ಗಸೂಚಿ ಅಂಶಗಳೇನು?
ರೌಡಿ ಶೀಟ್ ತೆರಯುವ ಮುನ್ನ ಸಂಬಂಧಿಸಿದ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿ ಆ ಬಗ್ಗೆ ಮಾಹಿತಿ ನೀಡಬೇಕು.
ರೌಡಿ ಶೀಟ್ ಹಾಕದಂತೆ ಮನವಿ ಸಲ್ಲಿಸಲು ಆ ವ್ಯಕ್ತಿಗೆ ಅವಕಾಶ ನೀಡಬೇಕು.
ರೌಡಿ ಶೀಟ್ ಹಾಕುವಾಗ ಸಕಾರಣ ನೀಡಿ ಲಿಖಿತ ಆದೇಶ ನೀಡಬೇಕು.
ಅಪರಾಧ ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಹಾಗೂ ನಿಖರ ಮಾಹಿತಿ ಹೊಂದಿದ್ದರೆ ಪೊಲೀಸರು ರೌಡಿ ಪಟ್ಟಿ ತೆರೆಯಬಹುದು.
ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ರೌಡಿ ಶೀಟ್ ತೆಗೆಯಲು ಅಧಿಕೃತ ಲಿಖಿತ ಆದೇಶ ಹೊರಡಿಸಬೇಕು.
ಪ್ರತಿ ವರ್ಷ ರೌಡಿ ಶೀಟ್ ಮರು ಪರಿಶೀಲಿಸಿ, ಆಗಲೂ ಸಕಾರಣಗಳೊಂದಿಗೆ ಸಮಗ್ರವಾದ ಲಿಖಿತ ಆದೇಶ ಹೊರಡಿಸಬೇಕು
ಒಂದು ವೇಳೆ ರೌಡಿ ಶೀಟ್ ತೆರೆದ ನಂತರ ಅದನ್ನು ಪ್ರಶ್ನಿಸಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿಗೆ ಅವಕಾಶ ಮಾಡಿಕೊಡಬೇಕು.
ಒಬ್ಬ ಅಪರಾಧಿಕ ವ್ಯಕ್ತಿಯನ್ನು ರೌಡಿ ಶೀಟರ್ ಎಂದು ಹೆಸರಿಸುವ ಹಾಗೂ ಅಂತಹ ಇತಿಹಾಸ ಹೊಂದಿರುವವರನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕು ಎಂಬ ಕೋರಿಕೆಗಳ ಬಗ್ಗೆ ಶಾಸಕಾಂಗ ವಿಸ್ತೃತ ಕಾನೂನು ರಚಿಸಬೇಕು,' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
,
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.