



ಬೆಂಗಳೂರು: ನಿತ್ಯಹರಿದ್ವರ್ಣದ ಕಾಡುಗಳ ಪಶ್ಚಿಮಘಟ್ಟ ಮತ್ತು 5 ಹುಲಿ ಸಂರಕ್ಷಿತ ತಾಣಗಳಿಂದ ಸಮೃದ್ಧವಾದ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ 2ನೇ ಸ್ಥಾನ ಪಡೆದಿರುವುದು ಸಂತಸದ ವಿಷಯವಾಗಿದೆ ಎಂದು ಅರಣ್ಯ ಜೀವವಿಶಾಸ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ರಾಷ್ಟ್ರೀಯ ಹುಲಿ ಪ್ರಾಕಾರ ದೇಶದಲ್ಲಿನ ಹುಲಿಗಳ ಸಂಖ್ಯೆ ಕುರಿತಂತೆ ಇಂದು ಅಕೃತ ಪ್ರಕಟಣೆ ಹೊರಡಿಸಿದ್ದು ಇದರ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 2018ರಲ್ಲಿ ನಡೆದ ಹುಲಿ ಗಣತಿಯಲ್ಲಿ 404 ಪ್ರತ್ಯೇಕ ಹುಲಿಗಳು ಕ್ಯಾಮರಾ ಟ್ರ್ಯಾಪ್ ಆಗಿದ್ದು, ವಿಶ್ಲೇಷಣೆಯಲ್ಲಿ ಸುಮಾರು 524 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು.
ಈ ಬಾರಿ 435 ಪ್ರತ್ಯೇಕ ಹುಲಿಗಳು ಕ್ಯಾಮರಾ ಟ್ರ್ಯಾಪ್ ಆಗಿದ್ದು, ವಿಶ್ಲೇಷಣೆಯ ರೀತ್ಯ ರಾಜ್ಯದಲ್ಲಿ 563 ವ್ಯಾಘ್ರಗಳಿವೆ ಎಂದು ಅಂದಾಜಿಸಲಾಗಿದೆ ಎಂದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.