



ಕಾಸರಗೋಡು: ಕಾಸರಗೋಡು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ನಾಟಕ ಮೂಲದ ಡಿ.ಶಿಲ್ಪಾ ಅಧಿಕಾರ ವಹಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿಯಾಗಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪಿ. ಬಿಜೋಯ್ ರವರನ್ನು ತಿರುವನಂತಪುರಕ್ಕೆ ವರ್ಗಾಹಿಸಲಾಗಿದ್ದು, ಇವರ ಬದಲಿಗೆ ಶಿಲ್ಪಾ ರವರನ್ನು ನೇಮಿಸಲಾಗಿದೆ. ಬಿಜೋಯ್ ತಿರುವನಂತಪುರ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರನ್ನಾಗಿ ನೇಮಿಸಲಾಗಿದೆ.
ಶಿಲ್ಪಾ ಎರಡನೇ ಬಾರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಶಿಲ್ಪಾ 2020 ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ದಕ್ಷ ಸೇವೆ ನೀಡಿದ್ದರು. ಬಳಿಕ 2021 ರಲ್ಲಿ ವರ್ಗಾವಣೆ ಗೊಳಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಸರಗೋಡು ಎಸ್ಪಿಯಾಗಿ ನೇಮಿಸಲಾಗಿದೆ. ಕಾಸರಗೋಡಿನ ಮೊದಲ ಮಹಿಳಾ ಎಸ್ಪಿಯಾಗಿ 2020 ರಲ್ಲಿ ಡಿ.ಶಿಲ್ಪಾ ನೇಮಕಗೊಂಡಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.