



ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪುನರ್ ಪ್ರತಿಷ್ಠೆ, ರಥೋತ್ಸವ, ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಸಲುವಾಗಿ ಎಪ್ರಿಲ್ 1ರಿಂದ ಎಪ್ರಿಲ್ 15 ರವರೆಗೆ ಸುಮಾರು 2 ರಿಂದ 3ಲಕ್ಷ ಭಕ್ತಾಧಿಗಳಿಗಾಗಿ ನಡೆಯುವ ನಿತ್ಯ ಅನ್ನದಾಸೋಹಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ವೈಭವದ ಶೋಭಾಯಾತ್ರೆಯೊಂದಿಗೆ ಪ್ರಸಾದ ರೂಪದ ಹೊರೆಕಾಣಿಕೆಯು ಸಮರ್ಪಣೆಗೊಂಡಿತು. ಹೊರೆಕಾಣಿಕೆಯ ಶೋಭಾಯಾತ್ರೆಯೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಸರುಗಳಾದ ಶ್ರೀ ವಾಸುದೇವ ಆಸ್ರಣ್ಣ, ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಶ್ರೀಅನಂತ ಪದ್ಮನಾಭ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಣ, ಶ್ರೀಕರ ಅಸ್ರಣ್ಣ ಹಾಗೂ ಶ್ರೀ ಹರಿಕೃಷ್ಣ ಪುನರೂರು, ಶ್ರೀ ಶ್ರೀಪತಿ ಆಚಾರ್ಯ ಮೂಡಬಿದ್ರೆ, ಶ್ರೀ ಭುವನಾಭಿರಾಮ ಉಡುಪ, ಶ್ರೀಮಧುಕರ ಅಮೀನ್ ಶಿಬರೂರು, ಶ್ರೀ ಸುಬಹ್ಮಣ್ಯ ಭಟ್ ಶಿಬರೂರು ಮತ್ತಿತರು ಉಪಸ್ಥಿತರಿದ್ದರು ಇವರನ್ನು ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ|| ಜಿ ಶಂಕರ್, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಶ್ರೀ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ವಿನಯ ಕರ್ಕೆರ ಉಪಸ್ಥಿತರಿದ್ದು ಗೌರವಪೂರ್ವಕವಾಗಿ ಬರಮಾಡಿಕೊಂಡರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.