logo
WhatsApp Image 2026-04-02 at 14.46.04.jpeg
hindalco everlast.jpeg

ಕೆಮ್ಮಣ್ಣು: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಹಠಾತ್ ಸಾವು

ಟ್ರೆಂಡಿಂಗ್
share whatsappshare facebookshare telegram
18 Oct 2022
post image

ಉಡುಪಿ:

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ಹಠಾತ್ ಆಗಿ ಮೃತಪಟ್ಟ ಘಟನೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಕಂಬಳತೋಟ ಎಂಬಲ್ಲಿ ಅ.17ರಂದು ನಡೆದಿದೆ. ಕಂಬಳತೋಟ ನಿವಾಸಿ ವಸಂತಿ ಅವರ ಮಗಳು 32ವರ್ಷ ಪ್ರಾಯದ ಸ್ಮೀತಾ ಮೃತದುರ್ದೈವಿ. ಇವರು ಅ.8ರಂದು ಒರಿಸ್ಸಾ ರಾಜ್ಯ ಪ್ರವಾಸ ಕೈಗೊಂಡು, ಅ.16ರಂದು ಊರಿಗೆ ವಾಪಾಸ್ಸಾಗಿದ್ದರು. ಆ ಬಳಿಕ ಸ್ಮೀತಾ ಅವರಿಗೆ ತೀವ್ರ  ಕೆಮ್ಮು ಬಂದಿದ್ದು,  ಔಷದ  ಸೇವಿಸಿ  ಮಲಗಿದ್ದರು. ಅ.17ರಂದು ಉಸಿರಾಟ ಸಮಸ್ಯೆ ತೀವ್ರಗೊಂಡಿದ್ದು, ಉಡುಪಿ ಗಾಂಧಿ ಅಸ್ಪತೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸ್ಮಿತಾ ಮೃತಪಟ್ಟಿದ್ಧಾರೆ ಎಂದು ತಿಳಿಸಿದ್ಧಾರೆ. ಸ್ಮಿತಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.