



ಕಾರ್ಕಳ : ಕೇರಳ ರಾಜ್ಯ ಬಿಜೆಪಿ ವಕ್ತಾರ ಸಂದೀಪ್ ಜಿ ವಾರಿಯರ್ ಕಾರ್ಕಳ ಬಿಜೆಪಿ ಕಛೇರಿಗೆ ಶನಿವಾರ ಭೇಟಿ ನೀಡಿದರು. ಬಿಜೆಪಿ ವಕ್ತಾರ ಭೇಟಿ ಬಿಜೆಪಿ ಕಛೇರಿಯಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ ಅಂಗವಾಗಿ ಪಂಡಿತ್‌ಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿ ಅವರು ಮಾತನಾಡಿದರು. ಕೇರಳ ರಾಜ್ಯದಲ್ಲಿ ಬಿಜೆಪಿ ಬಲಗೊಳ್ಳುತ್ತಿದೆ. ಉಗ್ರರ ಚಟುವಟಿಕೆ, ಮತಾಂತರ, ಲವ್ ಜಿಹಾದ್, ಇನ್ನಿತರ ರಾಷ್ಟ ವಿರೋಧಿಗಳನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸುವುದರಿಂದ ಹಾಗೂ ಕೇರಳದಲ್ಲಿ ಪ್ರಸ್ತುತ ಇರುವ ಕೋವಿಡ್ ಗಂಭೀರ ಸಮಸ್ಯೆಯನ್ನು ಇಳಿಸುವಲ್ಲಿ ದೇಶದ ಪ್ರಧಾನಿ ಕೈಗೊಂಡ ನಿರ್ಣಯದಿಂದ ಪಕ್ಷವು ಕೇರಳದಲ್ಲಿ ಪ್ರಬಲವಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಂತೆ ಕೇರಳದಲ್ಲಿಯೂ ಕೂಡ ಬಿಜೆಪಿ ರಾಜ್ಯಭಾರ ಮಾಡುವುದು ನಿಶ್ಚಿತ ಎಂದರು. ಕಾರ್ಕಳ ತಾಲೂಕು ಬಿಜೆಪಿ ವಕ್ತಾರ ಕೆ.ಎಸ್. ಹರೀಶ್ ಶೆಣೈ , ಪುರಸಭಾ ಸದಸ್ಯ ಸಂತೋಷ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.