



ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಪ್ಯಾರಾಗಾನ್ ರೆಸ್ಟೋರೆಂಟ್ ಮತ್ತು ಇಲ್ಲಿನ ಬಿರಿಯಾನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ.
ಕೋಯಿಕ್ಕೋಡ್‌ನ ಪ್ಯಾರಾಗಾನ್ ರೆಸ್ಟೋರೆಂಟ್ ಜಗತ್ತಿನ ಪ್ರಮುಖ 150 ರೆಸ್ಟೋರೆಂಟ್ ಪಟ್ಟಿಗಳಲ್ಲಿ 11ನೇ ಸ್ಥಾನ ಪಡೆದಿದೆ. ಅಲ್ಲದೇ ಇಲ್ಲಿ ದೊರೆಯುವ ಬಿರಿಯಾನಿಗೂ 11ನೇ ಸ್ಥಾನ ಲಭಿಸಿದೆ.
ಪ್ಯಾರಾಗಾನ್ ರೆಸ್ಟೋರೆಂಟ್ ಜಗತ್ತಿನಲ್ಲೇ ಹೆಸರುವಾಸಿಯಾಗಿದೆ. ಕೋಯಿಕ್ಕೋಡ್ಗೆ ಆಗಮಿಸುವ ಪ್ರತಿ ಪ್ರವಾಸಿಗನನ್ನೂ ಸೆಳೆಯುವ ಪ್ಯಾರಾಗಾನ್ ರೆಸ್ಟೋರೆಂಟ್ ಈಗ ಮತ್ತಷ್ಟು ಮಹತ್ತರ ಸ್ಥಾನ ಪಡೆದಿದೆ.
ಕ್ರೊಯೇಷಿಯಾ ಮೂಲದ ಆನ್ಲೈನ್ ಟ್ರಾವೆಲ್ ಗೈಡ್ ಸಂಸ್ಥೆಯಾಗಿರುವ ಟೇಸ್ಟ್ ಅಟ್ಲಾಸ್, ಈ ಪಟ್ಟಿಯನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.
ಜೂನ್ 23ರ ಶುಕ್ರವಾರದಂದು ಬಿಡುಗಡೆಯಾದ ಈ ಪಟ್ಟಿಯಲ್ಲಿ ಜಗತ್ತಿನ ಪ್ರಮುಖ ರೆಸ್ಟೋರೆಂಟ್ ಮತ್ತು ಅಲ್ಲಿ ಸಿಗುವ ಖಾದ್ಯಗಳನ್ನು ಗುಣಮಟ್ಟ, ರುಚಿ ಆಧಾರ ಮೇಲೆ ಪಟ್ಟಿ ಮಾಡಲಾಗಿದೆ.
ಈ ಪಟ್ಟಿಯಲ್ಲಿ ವಿಯೆನ್ನಾದ ಫಿಗ್ಲ್ಮುಲ್ಲರ್ ರೆಸ್ಟೋರೆಂಟ್ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಸಿಗುವ ‘ಶ್ನಿಟ್ಜೆಲ್ ವೀನರ್ ಆರ್ಟ್’ ಜಗತ್ತಿನ ಅತ್ಯಂತ ರುಚಿಕರ ಆಹಾರ ಎಂದು ಸಂಸ್ಥೆ ಹೇಳಿದೆ. ನ್ಯೂಯಾರ್ಕ್ ನಗರದ ‘ಕ್ಯಾಟ್ಜ್ ಡೆಲಿಕಾಟೆಸೆನ್’ ರೆಸ್ಟೋರೆಂಟ್ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ‘ಪಾಸ್ಟ್ರಾಮಿ ಆನ್ ರೈ’ ಎರಡನೇ ರುಚಿಕರ ಆಹಾರ ಎಂದು ಟೇಸ್ಟ್ ಅಟ್ಲಾಸ್ ಹೇಳಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.