



ಸರ್ವಧರ್ಮಗಳ ಸಮನ್ವಯತೆಯ ಕೆರುವಾಶೆ ಗ್ರಾಮ:
ಶ್ವೇತಾ ಪತ್ರಿಕೋದ್ಯಮ ವಿಭಾಗ ಎಂ ಪಿ ಎಂ ಕಾರ್ಕಳ
ಸದಾಕಾಲ ಹಚ್ಚ ಹಸಿರಿನಿಂದ ಕುಡಿರುವ ಬೆಟ್ಟಗುಡ್ಡಗಳು ದೂರ ದೂರ ಸಾಗಿದೆಂತೆಲ್ಲಾ ಕಾಣ ಸಿಗುವ ಮರಗಿಡಗಳು ಸಾಲುಗಳು ಅಲ್ಲಿಲ್ಲಿ ಕಿರಿದಾದ ನದಿ ಕಣಿವೆಗಳು ವಿಭಿನ್ನ ಶೈಲಿಯಲ್ಲಿ ಕೆತ್ತಲಾಗಿರುವ ದೇವಾಲಯಗಳು ಈ ಸುಂದರವಾದ ತಾಣ ಕಂಡು ಬರುವುದು ಈ ಕೆರ್ವಾಶೆಯನ್ನು ಪ್ರಮುಖವಾಗಿ ಹೋಬಳಿ ಗ್ರಾಮ ಎಂದು ಪ್ರಸಿದ್ದಿಯನ್ನು ಹೊಂದಿದೆ
ಸರ್ವಧರ್ಮ ಸಮನ್ವಯತೆ: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಪುಟ್ಟ ಗ್ರಾಮ. ಇದು ಸುಮಾರು 3018 ಜನಸಂಖ್ಯೆ ಯನ್ನು ಹೊಂದಿದೆ.ಸಹಜ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಪ್ರದೇಶ ಇಲ್ಲಿ ಹಿಂದೂ ಮುಸ್ಲಿಂ ಕೃಶ್ಚಿಯನ್ , ಹಾಗೂ ಜೈನ ಧರ್ಮದ ಜನರು ಸಹಬಾಳ್ವೆ ಯಿಂದ ಬದುಕುತಿದ್ದಾರೆ ಆರೋಗ್ಯಕರ, ಶಾಂತಿಯುತ ಮತ್ತು ಸಂತೋಷದ ಜೀವನವನ್ನು ನಡೆಸುತಿದ್ದಾರೆ. ಜನರು ಸರಳ ಜೀವನವನ್ನು ನಡೆಸುತ್ತಾರೆ, ಮುಖ್ಯವಾಗಿ ಕೂಲಿ ಮತ್ತು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೂಲ ಸೌಕರ್ಯ : ಆಸ್ಪತ್ರೆಗಳು,ಸರಿಯಾದ ನೈರ್ಮಲ್ಯ ವ್ಯವಸ್ಥೆಗಳು, ಒಳಚರಂಡಿ ವ್ಯವಸ್ಥೆಗಳು,ಸರ್ಕಾರಿ ಶಾಲೆಗಳು, ಮೈದಾನ ಮಕ್ಕಳು ಮುಕ್ತವಾಗಿ ಆಡಬಹುದು .,ವಿದ್ಯುತ್,ಪಂಚಾಯತ್ ನಳ್ಳಿ ನೀರು ,ಸರ್ಕಾರಿ ಬಾವಿ,ಮುಂತಾದ ಹಲವಾರು ಮೂಲಭೂತ ಸೌಕರ್ಯಗಳನ್ನು ಕೆರುವಾಶೆ ಗ್ರಾಮದಲ್ಲಿ ಕಾಣಬಹುದು.
ಧಾರ್ಮಿಕ ಸ್ಥಳ : ಇಲ್ಲಿ ಸುಮಾರು 5 ಧಾರ್ಮಿಕ ಕೇಂದ್ರವನ್ನು ಹೊಂದಿದೆ, ಸೊಗಸಾದ ದೃಶ್ಯಾವಳಿಗಳನ್ನು ನೋಡಬಹುದು ಮಹಾಲಿಂಗೇಶ್ವರ ದೇವಸ್ಥಾನ ಅದರ ಎರಡು ಬದಿಯಲ್ಲಿ ಜೈನ ಬಸದಿಯನ್ನು ಹೊಂದಿದೆ ಹಲವಾರು ದೈವ ಕ್ಷೇತ್ರ ಹೊಂದಿರುವ ಪುಣ್ಯ ಭೂಮಿಯಾಗಿದೆ .ಇಲ್ಲಿನ ಜನರು ಈ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅಪಾರ ನಂಬಿಕೆಯನ್ನು ಹೊಂದಿದ್ದಾರೆ ಹೆಚ್ಚಿನವರು ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ.
ಸಾಧಕರು : ತಮ್ಮ ಜಾನಪದ ಕಲೆಯಾದ ದೈವ ನರ್ತಕರಾಗಿ ಇಡೀ ಊರಿನಲ್ಲಿ ಸೇವೆಯನ್ನು ನೀಡಿ ಜಾನಪದ ಕಲೆಯಲ್ಲಿ ಕೆರುವಾಶೆಯ ಉಗ್ಗಪ ಪರವರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಾತ್ರರಾಗಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ನಲ್ಲಿ ತೆಲಂಗಾಣದ ವಾರಂಗಲ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹ್ಯಾಕತನ್ ಸ್ಪರ್ಧೆಯಲ್ಲಿ 4939 ಅಂಕ ಪಡೆಯುವ ಮೂಲಕ ಚಿನ್ನದ ಪದಕ ಗಳಿಸಿದ್ದಾಳೆ. ಮಹಿಳೆಯರ ವಿಭಾಗದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಹರ್ಡಲ್, ಹೈಜಂಪ್, ಲಾಂಗ್ ಜಂಪ್ ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧಿಸಿ ಅಧಿಕ ಅಂಕ ಪಡೆದವರಿಗೆ ಚಿನ್ನದ ಪದಕ ಲಭಿಸುತ್ತೆ. ಈ ಸ್ಪರ್ಧೆಯಲ್ಲಿ ಅಕ್ಷತಾ 4939 ಅಂಕ ಪಡೆದು ಚಿನ್ನದ ಪದಕ ಪಡೆದು ತನ್ನೂರಿನ, ರಾಜ್ಯದ ಕೀರ್ತಿ ಹೆಚ್ಚಿಸಿದ್ದಾಳೆ. ಇಂತಹ ಹಲವಾರು ಸಾಧಕರನ್ನು ಈ ಗ್ರಾಮದಲ್ಲಿ ಕಾಣಬಹುದು ತಮ್ಮ ಸಾಧನೆಯ ಜೊತೆಗೆ ಊರಿನ ಹೆಗ್ಗಳಿಕೆಯನ್ನು ಹೆಚ್ಚು ಮಾಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.