logo
WhatsApp Image 2026-04-02 at 14.46.04.jpeg
hindalco everlast.jpeg

ಸಮಾಜ ಕಲ್ಯಾಣ ಇಲಾಖೆ ಸಚಿವರ ಊರಲ್ಲಿ ಖಾಕಿ ದರ್ಪ. ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ. ?

ಟ್ರೆಂಡಿಂಗ್
share whatsappshare facebookshare telegram
28 Dec 2021
post image

ಕೋಟ: ಕೋಟತಟ್ಟು ಗ್ರಾಮದ ಬಾರಿಕೆರೆ ಎಂಬಲ್ಲಿ ಕೊರಗ ಸಮುದಾಯದ ಮನೆಯಲ್ಲಿ ಸೋಮವಾರ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಏಕಾಏಕಿ ನುಗ್ಗಿದ ಪೊಲೀಸರು ಮನೆಮಂದಿಗೆ ಲಾಠಿ ಚಾರ್ಜ್ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ದಿಢೀರ್ ಆಗಿ ಮದುವೆ ಮನೆಗೆ ನುಗ್ಗಿದ ಕೋಟ ಪೊಲೀಸರು, ಡಿಜೆ ಹಾಗೂ ಲೈಟ್ ಆಫ್ ಮಾಡಿಸಿದ್ದಾರೆ. ಬಳಿಕ ಮದುಮಗ, ಹೆಣ್ಣುಮಕ್ಕಳೆಂದು ಲೆಕ್ಕಿಸದೇ ಲಾಠಿ ಬೀಸಿದ್ದಾರೆ ಎಂದು ಮನೆಯವರು ಆರೋಪಿದ್ದಾರೆ. ಲಾಠಿ ಚಾರ್ಜ್ ನಿಂದ ಮದುಮಗ, ಮಹಿಳೆಯರು ಸೇರಿದಂತೆ 9 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಹಲ್ಲೆ ನಡೆಸಿರುವ ಘಟನೆಗೆ ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆ ನಡೆಸಲು ಯಾವುದೇ ಕಾರಣವೂ ಇರಲಿಲ್ಲ ಎಂದು ದೂರಿದ್ದಾರೆ.

ಪೊಲೀಸರ ದಾಳಿಗೆ ಕಾರಣವೇನು.? ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿರುವ ಕೋಟತಟ್ಟು ಗ್ರಾಮದ ಬಾರಿಕೆರೆ ನಿವಾಸಿ ರಾಜೇಶ್ ಅವರ ಮದುವೆ ಕಾರ್ಯಕ್ರಮವು ಡಿ. 29 ರಂದು ಕುಮಟಾದಲ್ಲಿ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿ. 27 ರಂದು ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 9.40 ರ ಸುಮಾರಿಗೆ ಹೆದ್ದಾರಿ ಗಸ್ತು ಪೊಲೀಸರು ಮನೆಗೆ ಬಂದಿದ್ದು, ಡಿಜೆ ಬಂದ್ ಮಾಡುವಂತೆ ಸೂಚಿಸಿದ್ದಾರೆ.

ಈ ವೇಳೆ ನೈಟ್ ಕರ್ಫ್ಯೂ ನಾಳೆ ರಾತ್ರಿಯಿಂದ ಜಾರಿ ಆಗುತ್ತದೆ. ನಮ್ಮ ಡಿಜೆಯಿಂದ ಯಾರಿಗೂ ತೊಂದರೆ ಆಗುತ್ತಿಲ್ಲ. ಮನೆಯವರೇ ಹೆಚ್ಚಿನ ಮಂದಿ ಇದ್ದು, ಸ್ವಲ್ಪ ಹೊತ್ತು ಕುಣಿದು ಆ ಬಳಿಕ ಬಂದ್ ಮಾಡುವುದಾಗಿ ತಿಳಿಸಿದ್ದರು. ಆ ಬಳಿಕ ಪೊಲೀಸರು ಅಲ್ಲಿಂದ ಹಿಂದೆ ಹೋಗಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಕೋಟ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಯಾವ ಕಾರಣವೂ ಕೇಳದೇ ಡಿಕೆ, ಲೈಟ್ ಆಫ್‌ ಮಾಡಿ ಮೆಹಂದಿ ಮನೆಯಲ್ಲಿದ್ದ ಹೆಣ್ಣು ಮಕ್ಕಳು, ಮಹಿಳೆಯರು, ಮಧುಮಗನಿಗೆ, ಹಿರಿಯರು ಯಾರನ್ನು ನೋಡದೇ ಏಕಾಏಕಿಯಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಅಲ್ಲದೆ, ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.

ತಡರಾತ್ರಿಯವರೆಗೂ ಮದುವೆ ಮನೆಯಲ್ಲಿ ಡಿಜೆ ಸದ್ದು ಕೇಳುತ್ತಿತ್ತು.‌ ಹೀಗಾಗಿ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಪೊಲೀಸರು ಬಂದು ಡಿಜೆ ಆಫ್ ಮಾಡಿದ್ದಾರೆ. ಇದರಿಂದ ಮೆಹಂದಿ ಮನೆಯಲ್ಲಿ ಕೆಲಕಾಲ ಅಶಾಂತಿಯ ವಾತಾವರಣ ಸೃಷ್ಟಿಯಾಯಿತು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.