logo
WhatsApp Image 2026-04-02 at 14.46.04.jpeg
hindalco everlast.jpeg

ಶಾಂತಿ- ಸುವ್ಯವಸ್ಥೆ ಕಾಪಾಡಲು ರಸ್ತೆಗಿಳಿದ ಖಾಕಿ ಪಡೆ: ಮಂಗಳೂರಿನಾದ್ಯಂತ ಫುಲ್ ಟ್ರಾಫಿಕ್ ಜಾಮ್

ಟ್ರೆಂಡಿಂಗ್
share whatsappshare facebookshare telegram
21 Feb 2022
post image

ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ಯುವಕನೊಬ್ಬನ ಹತ್ಯೆ ನಡೆದಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಪೊಲೀಸರು ಇಂದು ಬೆಳ್ಳಂಬೆಳಗೆ ರಸ್ತೆಗಿಳಿದರು.

ನಗರದ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರು ಪಥಸಂಚನ ನಡೆಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬಿದರೆ, ದುಷ್ಕರ್ಮಿಗಳ ಹೃದಯದಲ್ಲಿ ನಡುಕ ಉಂಟು ಮಾಡಿದರು.

ಪೊಲೀಸರಿಂದ ಪಥ ಸಂಚಲನ ಬೆಳಗ್ಗೆ 8 ಗಂಟೆಗೆ

ಆರಂಭವಾಯಿತು. ಬಲ್ಲಾಳ್ ಬಾಗ್ ನಿಂದ ಶುರುವಾಗಿ ಪಿ.ವಿ.ಎಸ್ ಸರ್ಕಲ್, ಜ್ಯೋತಿ ಅಂಬೇಡ್ಕರ್, ಸರ್ಕಲ್ ಆಗಿ ಹಂಪನಕಟ್ಟಾ ಮಾರ್ಗವಾಗಿ ಪೋಲಿಸ್ ಆಯುಕ್ತರ ಕಚೇರಿ ಬಳಿ ಕೊನೆಗೊಂಡಿತು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ಪಥಸಂಚಲನ ಆಯೋಜಿಸಲಾಗಿತ್ತು. ಡಿಸಿಪಿ ಹರಿರಾಂ ಶಂಕರ್, ಟ್ರಾಫಿಕ್ ಎಸಿಪಿ ನಟರಾಜ್ ಸಹಿತ ಹಲವು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡರು.

ಪಥ ಸಂಚಲನದಿಂದ ನಗರದ ಬಹುತೇಕ ಕಡೆಗಳಲ್ಲಿ ಬೆಳಗ್ಗೆ ಟ್ರಾಫಿಕ್ ಜಾಮ್ ಉಂಟಾಯಿತು. ಅನೇಕ ಕಡೆಗಳಲ್ಲಿ ಪಥ ಸಂಚಲನದ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಕೂಡ ಮಾಡಲಾಗಿತ್ತು.

ಕಳೆದ ಕೆಲವು ದಿನಗಳಿಂದ ಕೆಲವು ವಿಷಯಗಳು ಗೊಂದಲ ಮೂಡಿಸುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಜನತೆಯಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಶಾಲಾ ಕಾಲೇಜುಗಳು ಪರಿಸರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗಿದೆ ಎಂದು 

ಪೊಲೀಸ್  ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.