logo
WhatsApp Image 2026-04-02 at 14.46.04.jpeg
hindalco everlast.jpeg

ಅಮೆರಿಕಾದಲ್ಲಿ ಭಾರತೀಯ ಪತ್ರಕರ್ತನ ಮೇಲೆ ಖಲಿಸ್ತಾನಿ ಬೆಂಬಲಿಗರ ಹಲ್ಲೆ, ನಿಂದನೆ

ಟ್ರೆಂಡಿಂಗ್
share whatsappshare facebookshare telegram
26 Mar 2023
post image

ವಾಷಿಂಗ್ಟನ್ ಡಿಸಿ:‌ ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತರೊಬ್ಬರ ಮೇಲೆ ಖಲಿಸ್ತಾನಿ ಪರ ಬೆಂಬಲಿಗರು ಹಲ್ಲೆ ನಡೆಸಿ, ನಿಂದಿಸಿರುವ ಘಟನೆ ನಡೆದಿದೆ.

ಮಾ.25 ರಂದು ಮಧ್ಯಾಹ್ನ ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿ ಪಕ್ಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಗ್ಗೆ ವರದಿ ಮಾಡಲು ತೆರಳಿದ್ದ ವಾಷಿಂಗ್ಟನ್ ಮೂಲದ ಭಾರತೀಯ ಪತ್ರಕರ್ತ ಲಲಿತ್ ಝಾ ಅವರನ್ನು ತಡೆದು ಕೆಲ ಖಲಿಸ್ತಾನಿ ಪರ ಬೆಂಬಲಿಗರು ಅಸಭ್ಯವಾಗಿ ಮಾತನಾಡಿ ನಿಂದಿಸಿದ್ದಾರೆ. ಇಷ್ಟೆಲ್ಲದೇ ಕೋಲುಗಳಿಂದ ಕಿವಿಗೆ ಹೊಡೆದಿದ್ದಾರೆ ಎಂದು ಪತ್ರಕರ್ತ ಲಲಿತ್‌ ಘಟನೆಯ ಬಗ್ಗೆ ವಿಡಿಯೋ ಚಿತ್ರೀಕರಿಸಿ ಟ್ವಿಟರ್‌ ನಲ್ಲಿ ಹಾಕಿದ್ದಾರೆ.

ಯಾವಾಗ ನಿಂದನೆ ಹಾಗೂ ದೈಹಿಕ ಹಲ್ಲೆ ಆಯಿತೋ ಆ ವೇಳೆಗೆ ಪತ್ರಕರ್ತ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಲಲಿತ್‌ ಅವರನ್ನು ರಕ್ಷಿಸಿದ್ದಾರೆ. ಹಿರಿಯ ಪತ್ರಕರ್ತರೊಬ್ಬರ ಮೇಲೆ ಖಲಿಸ್ತಾನಿ ಬೆಂಬಲಿಗರು ಮಾಡಿರುವ ಹಲ್ಲೆ ಖಂಡನೀಯ ಎಂದು ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿ ಕಟುವಾಗಿ ಟೀಕಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.