



ಕಾರ್ಕಳ: ಕೆ.ಎಂ ಎಫ್ ರಾಜ್ಯದ ಬ್ರಾಂಡ್, ಅದನ್ನು ಇತರ ಹಾಲುತ್ಪಾದಕ ಕಂಪನಿಗಳ ಜೊತೆ ವಿಲಿನಗೊಳಿಸಲು ಸಾಧ್ಯವಿಲ್ಲ ಎಂದು ದ.ಕ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ನಿಯಮಿತ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು ಅವರು ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಕಾರ್ಕಳ ತಾಲೂಕು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ಕೃಷಿಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತಿದೆ. ಕಳೆದ ವರ್ಷದಿಂದ ಈವರ್ಷ ಹಾಲಿನ ಉತ್ಪಾದನೆಯು ಕುಂಠಿತ ಗೊಳ್ಳುತ್ತಿದೆ ಎಂದು ಹೇಳಿದರು
ದನಕಳವು ಪ್ರಕರಣಗಳು ,ಪಶುಗಳ ಆರೋಗ್ಯಸಂಬಂದಿ ಕಾಯಿಲೆಗಳಿಂದ ಮೃತಪಟ್ಟ ರೆ ಪರಿಹಾರ ನೀಡಲಾಗುವುದು ,
ದ.ಕ ಉಡುಪಿ ಜಿಲ್ಲೆಗಳಲ್ಲಿ ಪಶುಗಳಿಗೆ ಚರ್ಮಗಂಟು ರೋಗದ ಲಕ್ಷಣಗಳು ಕಂಡುಬಂದಿಲ್ಲ .ಆದರೂ ಅದರ ಮುನ್ನೆಚ್ಚರಿಕೆ ಗಾಗಿ 25000 ಲಸಿಕೆ ಯನ್ನು ಒಕ್ಕೂಟವು ಈಗಾಗಲೇ ತರಿಸಿಕೊಂಡಿದೆ , ಅದರೆ ಚರ್ಮ ಗಂಟು ರೋಗದ ಪಶುಗಳ ಹಾಲನ್ನು ಉಪಯೋಗಿಸಬಹುದಾಗಿದೆ ಎಂದು ಸುಚರಿತಶೆಟ್ಟಿ ಹೇಳಿದರು
ದ.ಕ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದ ವತಿಯಿಂದ ಧರ್ಮಸ್ಥಳ ದೇವಾಲಯಕ್ಕೆ ತಿಂಗಳಿಗೆ 20 ಲಕ್ಷ ಮೌಲ್ಯದ ಧರ್ಮಸ್ಥಳ ಕ್ಕೆ ತುಪ್ಪ ಸರಬರಾಜು ಮಾಡಲಾಗುತ್ತಿದೆ . ಮಹಿಳೆಯರ ಶಿಕ್ಷಣಕ್ಕಾಗಿ ಉಚಿತವಾಗಿ ಒಕ್ಕೂಟ ವತಿಯಿಂದ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಹೊಸ ಹಾಸ್ಟೆಲ್ ನಿರ್ಮಾಣಕ್ಕಾಗಿ ಎರಡು ಕೋಟಿ ಅನುದಾನಮೀಸಲಿಡಲಾಗಿದೆ ಮಣಿಪಾಲದಲ್ಲಿ ಐಸ್ಕ್ರೀಂ ಪ್ಲಾಂಟ್ , ಗ್ರಾಹಕರಿಗೆ ಆ್ಯಪಲ್ ಮಿಲ್ಕ್ ಶೇಕ್ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಒಕ್ಕೂಟವು ಸಜ್ಜಾಗಿದೆ ಎಂದರು .ಉಡುಪಿ ಜಿಲ್ಲೆಯಲ್ಲಿ ದಿನವಹಿ ಸರಾಸರಿ 1,30,000 ಲೀ ಹಾಲು , ಮೊಸರು 3000 ಕಿ.ಗ್ರಾಂ ,2000 ಕಿ.ಗ್ರಾಂ ಮಜ್ಜಿಗೆ ನಿತ್ಯ ಮಾರಾಟವಾಗುತ್ತಿದೆ . ಹಾಲಿನ ಗುಣಮಟ್ಟದಲ್ಲಿ ಒಕ್ಕೂಟವು ದೇಶದಲ್ಲಿ ಹಾಗೂ ರಾಜ್ಯದಲ್ಲಿಯೆ ಮುಂದಿದೆ ಎಂದು ಹೇಳಿದರು
ನಿರ್ದೇಶಕ ಸುಧಾಕರ ಶೆಟ್ಟಿ ಬಜಗೋಳಿ ಮಾತನಾಡಿ ಒಕ್ಕೂಟದಿಂದ ಹಾಲಿಗೆ ರೂ.5 ಹೆಚ್ಚಳ ಮಾಡಬೇಕೆಂಬ ಒತ್ತಾಯವಿದೆ ಅದಕ್ಕಾಗಿ ಮುಖ್ಯಮಂತ್ರಿ ಯವರಿಗೆ ಪತ್ರವನ್ನು ಬರೆದಿದ್ದೇವೆ .ಉದ್ಯಮ ಸ್ವಾವಲಂಬಿ ಯಾಗಿಸಲು 5ಸೆಂಟ್ಸ್ ಜಾಗದಲ್ಲೂ ಹೈನುಗಾರಿಕೆ ಮಾಡಿದವರಿದ್ದಾರೆ. ಅಂತಹ ಕೃಷಿಕರಿಗೆ ಈ ಬೆಲೆ ಸಾಕಾಗುವುದಿಲ್ಲ ಎಂದರು
ಒಕ್ಕೂಟದ ನಿರ್ದೇಶಕ ನರಸಿಂಹ ಕಾಮತ್ ಕೇಂದ್ರ ಸರಕಾರದ ಸಹಕಾರಿ ಸಚಿವಾಲಯವು ಹೆಚ್ಚಿನ ನಿರೀಕ್ಷೆ ಗಳನ್ನು ಹುಟ್ಟು ಹಾಕಿದೆ. ಕೇಂದ್ರ ಸರಕಾರವು ಹೆಚ್ಚಿನ ಪ್ರಮಾಣದಲ್ಲಿ ಅತ್ಮನಿರ್ಭರ ಯೋಜನೆಗಳಡಿ ಸ್ವಾವಲಂಬಿ ಕಾರ್ಯಗಳಿಗೆ ಅವಕಾಶ ನೀಡುತ್ತಿದೆ ಸಹಕಾರ ಭಾರತಿ ಹಾಗೂ ಭಾರತೀಯ ಕಿಸಾನ್ ಸಂಘ ವತಿಯಿಂದ ಹಾಲಿನ ಖರೀದಿ ದರ ಏರಿಸುವಂತೆ ಸರಕಾರಕ್ಕೆ ಒತ್ತಡ ಹೇರಲಾಗುತ್ತಿದೆ ಹೇಳಿದರು ವಿವಿಧ ರಾಜ್ಯಗಳಲ್ಲಿ ಹಾಲಿಗೆ ಬೆಲೆ ಹೆಚ್ಚಿಸಲಾಗಿದ್ದೆ. ಕಳೆದ ಸಾಲಿನಿಂದ ಈ ಬಾರಿ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆ ಯಾಗುತ್ತಿದೆ .. ಕನಿಷ್ಠ ಹತ್ತು ರೂಪಾಯಿ ಎರಿಕೆಯಾದರೆ ಹೈನುಗಾರಿಕೆ ಗೆ ಉತ್ಪಾದಕರಿಗೆ ಸುಲಭವಾಗುತ್ತದೆ ಎಂದರು. ನಿರ್ದೇಶಕ ಬೋಳ ಸದಾಶಿವ ಶೆಟ್ಟಿಮಾತನಾಡಿದರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ನಾಯಕ್ ಸಾಣೂರು ಅಧ್ಯಕ್ಷತೆ ವಹಿಸಿದ್ದರು ,ಸಭೆಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅರ್ ಬಿ ಜಗದೀಶ್ , ಜಿಲ್ಲಾ ಪ್ರತಿನಿಧಿಗಳಾದ ಮೊಹಮ್ಮದ್ ಷರೀಫ್, ಉದಯ್ ಕುಮಾರ್ , ಸಂಘದ ಕಾರ್ಯದರ್ಶಿ ಬಾಲಕೃಷ್ಣ ಭೀಮಗುಳಿ ಪ್ರಸ್ತಾವಿತ ಮಾತನಾಡಿದರು .ಪತ್ರಕರ್ತ ಹರೀಶ್ ಬೈಲೂರು ಕಾರ್ಯಕ್ರಮ ನಿರೂಪಿಸಿದರು ಸಂಘದ ಉಪಾಧ್ಯಕ್ಷ ಹರೀಶ್ ಸಚ್ಚರಿಪೇಟೆ ಸ್ವಾಗತಿಸಿದರು.ಕೋಶಾಧಿಕಾರಿ ರಾಂ ಅಜೆಕಾರು ಧನ್ಯವಾದ ವಿತ್ತರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.