logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪ್ಯಾಶನ್ ಡಿಸೈನಿಂಗ್ ಯಶಸ್ಸಿಗೆ ಜ್ಞಾನ , ನಡವಳಿಕೆ , ದೂರದ್ರಷ್ಟಿ ಅತೀಮುಖ್ಯ: ಸುಧಾಕರ್

ಟ್ರೆಂಡಿಂಗ್
share whatsappshare facebookshare telegram
9 May 2022
post image

ಕಾರ್ಕಳ: ಆಧುನಿಕ ಜಗತ್ತಿನಲ್ಲಿ ಪ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕಾದರೆ ಪ್ಯಾಶನ್ ಡಿಸೈನಿಂಗ್ ಬಗ್ಗೆ ಜ್ಞಾನ , ನಡವಳಿಕೆ , ದೂರದ್ರಷ್ಟಿ ಅತ್ಯಗತ್ಯ. ಇಂದು ಪ್ಯಾಶನ್ ಡಿಸೈನಿಂಗ್ ಗೆ ವಿಪುಲ ಅವಕಾಶಗಳಿವೆ ಹಾಗೂ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳು ಕೂಡ ಸ್ರಷ್ಟಿಯಾಗುತ್ತಿವೆ ಇದರ ಅವಕಾಶವನ್ನು ಸದುಪಯೋಗ ಪಡೆದು ಕೊಳ್ಳಲು ಜೇಸಿ ತರಬೇತುದಾರ ಸುಧಾಕರ್ ಕರೆ ನೀಡಿದರು ಅವರು ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ವತಿಯಿಂದ ಕಾರ್ಕಳ ಬಂಗ್ಲೆಗುಡ್ಡೆ ಸಧ್ಭಾವನ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ಯಾಶನ್ ಡಿಸೈನಿಂಗ್ ಬಗ್ಗೆ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು ಜೀವನದಲ್ಲಿ ಅವಕಾಶವನ್ನು ಉಪಯೋಗಿಸಿಕೊಂಡು ಗುರಿ ತಲುಪುವಂತಹ ಛಲವಿದ್ದರೆ ಖಂಡಿತವಾಗಿಯೂ ನಿಖರವಾದ ಗುರಿಯನ್ನು ಮುಟ್ಟಬಲ್ಲ ಕ್ಷೇತ್ರ ಪ್ಯಾಶನ್ ಡಿಸೈನಿಂಗ್ ಕ್ಷೇತ್ರ ಇಲ್ಲಿ ಪ್ರತಿ ದಿನವು ಪ್ರತಿಸ್ಪರ್ಧಿಗಳಿಂದ ಪ್ರತಿಸ್ಪರ್ದೆ ಉಂಟಾಗುವ ಸಾಧ್ಯತೆಗಳಿವೆ ಇದನ್ನು ನಿಮ್ಮ ಚಾಕಚಕ್ಯತೆ ,ನೈಪುಣ್ಯತೆಯಿಂದ ಸುಲಭವಾಗಿ ಗೆಲ್ಲಬಹುದು ಎಂದರು ಈ ಸಂದರ್ಭದಲ್ಲಿ ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ, ಕಾರ್ಕಳ ಶಿರ್ಡಿ ಸಾಯಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಹಾಸ ಸುವರ್ಣ ಮಾತನಾಡಿ, ಪ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಹಲವಾರು ಮಂದಿ ಸಾಧನೆಗಳನ್ನು ಮಾಡಿದ್ದಾರೆ ಅವರಿಗೆ ಯೋಗ್ಯವಾದ ಮಾರ್ಗದರ್ಶನ , ಭೋದನೆ , ಅವಶ್ಯಕ ಅಂತಹ ಯೋಗ್ಯ ಪ್ರಮಾಣಿಕ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ನ ಮುಖ್ಯಸ್ಥೆ ಸಾಧನ ಜಿ ಆಶ್ರೀತ್ರವರು ನಿಜವಾಗಿಯೂ ಅನುಭವಿ ಹಾಗೂ ನೈಪುಣ್ಯತೆ ಹೊಂದಿರುವ ಪ್ರಮಾಣೀಕ ಹಾಗೂ ಜ್ಞಾನಭರೀತ ವ್ಯಕ್ತಿ ಯಾಗಿದ್ದಾರೆ.ಹಲವಾರು ಕಾಲೇಜುಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿದ ಅನುಭವವನ್ನು ಹೊಂದಿರುವ ಅವರ ಅಪಾರ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಅವರು ವಿಧ್ಯಾರ್ಥಿಗಳಿಗೆ ಕರೆ ನೀಡಿದರು ಅರುಣೋದಯ ವಿಶೇಷ ಶಾಲೆಯ ಶಿಕ್ಷಕ ಗಿರೀಶ್ ಶುಭಾಸಂಶನೆಗೈದರು. ವಸ್ತ್ರವಿನ್ಯಾಸಕ್ಕಾಗಿ ರಾಜ್ಯ ಮಟ್ಟದ ಗೋಲ್ಡನ್ ವುಮನ್ ಅವಾರ್ಡ್ ವಿಜೇತ ,ಖ್ಯಾತ ವಸ್ತ್ರವಿನ್ಯಾಸಕಿ, ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ಮುಖ್ಯಸ್ಥೆ ಸಾಧನ ಜಿ ಆಶ್ರಿತ್ ಪ್ರಸ್ತಾವನೆಗೈದರು ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ನ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಚಂದನಾರವರು ಪ್ರಾರ್ಥಿಸಿದರು ಸುಪ್ರಿಯಾರವರು ಸ್ವಾಗತಿಸಿ , ಕಾದಂಬರಿ ಯವರು ವಂದನಾರ್ಪಣೆಗೈದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.