



ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಭೀಮಾ ಜ್ಯುವೆಲ್ಲರ್ಸ್ ಸಂಸ್ಥೆಗಳ ಮಾಲೀಕ ಕೊಡುಗೈದಾನಿ ಬಿ. ಕೃಷ್ಣನ್ ( 76) ಇಂದು ಸೋಮವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸಹಿತ ಅನೇಕ ಕಡೆಗಳಲ್ಲಿ ಭೀಮಾ ಜ್ಯುವೆಲ್ಲರ್ಸ್ ಮಳಿಗೆಗಳನ್ನು ಸ್ಥಾಪಿಸಿದ್ದಾರೆ. ಉಡುಪಿಯಲ್ಲೂ ಆಭರಣ ಮಳಿಗೆಯನ್ನು ಹೊಂದಿದ್ದಾರೆ. ಉದ್ಯಮದ ಲಾಭಾಂಶದಲ್ಲಿ ಹತ್ತಾರು ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳಿಗೆ ಉದಾರ ದಾನ ನೀಡಿ ಧರ್ಮಬೀರು ಎನಿಸಿದ್ದರು. ಉಡುಪಿಯ ಕೃಷ್ಣ ಮಠ ಅಷ್ಟಮಠಗಳಿಗೆ ಅಪಾರ ದೇಣಿಗೆ ನೀಡುತ್ತಿದ್ದರು. ಅದಮಾರು, ಪೇಜಾವರ ಪಲಿಮಾರು ಪುತ್ತಿಗೆ , ಕಾಣಿಯೂರು, ಕೃಷ್ಣಾಪುರ, ಸೇರಿದಂತೆ ಅಷ್ಟಮಠಾಧೀಶರು, ಶಾಸಕ ರಘುಪತಿ ಭಟ್ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಗಣ್ಯರು ಕೃಷ್ಣನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.