logo
WhatsApp Image 2026-04-02 at 14.46.04.jpeg
hindalco everlast.jpeg

ಕೊಲ್ಲೂರು: ಮಲಗಿದ ಸ್ಥಿತಿಯಲ್ಲೇ ಮಹಿಳೆ ಮೃತ್ಯು

ಟ್ರೆಂಡಿಂಗ್
share whatsappshare facebookshare telegram
25 Sept 2022
post image

ಕೊಲ್ಲೂರು : ಮಲಗಿದ ಸ್ಥಿತಿಯಲ್ಲೇ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೈಂದೂರು ಗ್ರಾಮದ ಮಾರಿಕಟ್ಟೆ ಎಂಬಲ್ಲಿ ಸೆ.24ರಂದು ನಡೆದಿದೆ. ಮೃತರನ್ನು ಮಾರಿಕಟ್ಟೆ ನಿವಾಸಿ ಚಂದು ಎಂದು ಗುರುತಿಸಲಾಗಿದೆ. ಇವರು ಮಾರಿಕಟ್ಟೆಯ ಸಮೀಪ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದು, ಕೊಲ್ಲೂರಿನ ಶ್ರೀರತ್ನ ಗೆಸ್ಟ್ ಹೌಸ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದರು. ಪ್ರತಿ ದಿನ ಕೆಲಸ ಮುಗಿದ ಬಳಿಕ ಅಲ್ಲೆ ಸಮೀಪದ ಮಗಳು ಅಂಬಿಕಾ ಎನ್ನುವವರ ಮನೆಗೆ ಬಂದು ಹೋಗುತ್ತಿದ್ದರು. ಸೆ.24ರಂದು ಮಗಳು ಅಂಬಿಕಾ ಕರೆ ಮಾಡಿದ್ದು, ತಾಯಿ ಕರೆಯನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಅಂಬಿಕಾ ಅವರು ತಕ್ಷಣ ಗಂಡನೊಂದಿಗೆ ತಾಯಿ ವಾಸವಾಗಿರುವ ಬಾಡಿಗೆ ಮನೆಗೆ ಹೋಗಿ ನೋಡಿದಾಗ ತಾಯಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಮಲಗಿದ್ದರು. ಕೂಡಲೇ ಅಂಬ್ಯುಲೇನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಚಂದು ಅವರು ಅದಾಗಲೇ ಮೃತ ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.