



ಕೋಟ ಪಂಚವರ್ಣ ಯುವಕ ಮಂಡಲ ಇವರ ನೇತ್ರತ್ವದಲ್ಲಿ ಪ್ರತಿ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ 98ನೇ ಭಾನುವಾರದ ಸಂಭ್ರಮ ಆ ಪ್ರಯುಕ್ತ ಸ್ಥಳೀಯ ಯುವಕ ಮಂಡಲಗಳಾದ ಗಿಳಿಯಾರು ಯುವಕ ಮಂಡಲ ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಮಣೂರು ಫ್ರೆಂಡ್ಸ್, ಯಕ್ಷ ಸೌರಭ ಕಲಾರಂಗ ಕೋಟ ,ಮಹಿಳಾ ಬಳಗ ಹಂದಟ್ಟು, ರಕ್ತೇಶ್ವರಿ ಬಳಗ ಪಾಂಡೇಶ್ವರ ,ಧರ್ಮಸ್ಥಳ ಗ್ರಾ.ಯೋ.ಪಾಂಡೇಶ್ವರ ಒಕ್ಕೂಟ ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಸಂಯೋಜನೆಯೊಂದಿಗೆ ಪಾಂಡೇಶ್ವರದ ತೀರ್ಥಬೈಲು ಶಂಕರನಾರಾಯಣ ದೇವಸ್ಥಾನ ಸ್ವಚ್ಛಗೊಳಿಸುವ ಅಭಿಯಾನ ನಡೆಯಿತು. ಕಾರ್ಯಕ್ರಮಕ್ಕೆ ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಚಾಲನೆ ನೀಡಿ ಮಾತನಾಡಿ ಪ್ರಸ್ತುತ ಕಾಲಘಟ್ಡದಲ್ಲಿ ಪಕೃತಿಯನ್ನು ಹಾಳುಗೆಡವ ಮನಸ್ಥಿತಿ ಬಿಟ್ಟು ಅದನ್ನು ಆರಾಧಿಸುವ ಮನೋಭಾವನೆ ನಮ್ಮದಾಗಬೇಕು ಅದು ಈ ಪ್ರಕೃತಿಗೆ ಈ ಮನುಷ್ಯ ಸಂಕುಲ ಕೊಡುವ ಬಹುದೊಡ್ಡ ಕೊಡುಗೆ ಈ ಮಾತು ಏಕೆ ಉಲ್ಲೇಖಿಸುತ್ತೇನೆ ಎಂದರೆ ಇಂದು ವಾತಾವರಣದಲ್ಲಿ ಎದುರಾಗುತ್ತಿರುವ ಏರುಪೇರು ಇದಕ್ಕೆ ನಾವುಗಳೇ ಕಾರಣಿಭೂತರು,ಮನುಷ್ಯರಾದ ನಮ್ಮಿಂದ ಈ ಪರಿಸರ ಸಂರಕ್ಷಿಸುವ ಇಂಥಹ ಸ್ವಚ್ಛತಾ ಅಭಿಯಾನ ಇರಬಹುದು,ಗಿಡ ನಡಯವ ಕಾಯಕ ಇರಬಹುದು ಇಂತವುಗಳಿಂದ ಪರಿಶುದ್ಧ ವಾತಾವರಣವಾಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಆಯಾ ಭಾಗಗಳ ಯುವಕ ಮಂಡಲಗಳು ತಮ್ಮ ತಮ್ಮ ಪರಿಸರವನ್ನು ಕಾಯ್ದು ಶುಚಿಯಾಗಿರಿಸಿಕೊಂಡರೆ ಯಾವ ಪ್ರಾಕೃತಿಕ ವಿಕೋಪಗಳು ಸಂಭವಿಸದೆ ಮನುಷ್ಯ ಸೇರಿದಂತೆ ಚರಾಚರ ಜೀವಿಗಳನ್ನು ಉಳಿಸಲು ಸಹಕಾರಿಯಾಗುತ್ತದೆ.ದೇವಳಗಳ ಶುಚಿತ್ವದಿಂದ ನಾವುಗಳು ನಮ್ಮ ಮನಸ್ಸುಗಳು ಶುಭ್ರಗೊಳ್ಳುತ್ತದೆ.ಆ ಮೂಲಕ ದೇವರು ನಮ್ಮಲ್ಲಿಯೇ ಕಾಣಲು ಸಾಧ್ಯವಾಗುತ್ತದೆ.ಎಂದು ಐತಿಹಾಸಿಕ ಭೂತಾಳಪಾಂಡ್ಯನ ಆಳ್ವಿಕೆಯಲ್ಲಿ ಸೃಷ್ಠಿಯಾದ ಈ ದೇವದ ಕಾರ್ಯದಲ್ಲಿ ಕೈಜೋಡಿಸಿದ ಯುವಕ ಮಂಡಲಗಳಿಗೆ ಕೃತಜ್ಞತೆ ಸಲ್ಲಿಸಿದರು.ಶ್ರೀ ಶಂಕರನಾರಾಯಣ ದೇವಳದ ಮುಕ್ತೇಸರ ರಘುರಾಮ್ ಭಟ್,ರಕ್ತೇಶ್ವರ ಬಳಗ ಪಾಂಡೇಶ್ವರ ಇದರ ಅಧ್ಯಕ್ಷ ನಾರಾಯಣ ಆಚಾರ್ಯ,ಧ.ಗ್ರಾ.ಯೋಜನೆ ಪಾಂಡೇಶ್ವರ ವಲಯ ಸೇವಾ ಪ್ರತಿನಿಧಿ ಅಕ್ಷಯ,ಪಾಂಡೇಶ್ವರ ಒಕ್ಕೂಟದ ಅಧ್ಯಕ್ಷೆ ಸೀಮಾ,ಕೋಟದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಯಕ್ಷ ಸೌರಭ ಕಲಾ ರಂಗ ಕೋಟ ಇದರ ಸತ್ಯನಾರಾಯಣ ಆಚಾರ್ಯ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ,ಐರೋಡಿ ಗೋಳಿಬೆಟ್ಟು ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಗಿಳಿಯಾರು, ರಕ್ತೇಶ್ವರಿ ಬಳಗದ ಪದಾಧಿಕಾರಿಗಳು,ದೇವಳದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.