logo
WhatsApp Image 2026-04-02 at 14.46.04.jpeg
hindalco everlast.jpeg

ಕೋಟ: ಪಡಿತರ ಅಕ್ಕಿ ವಿಚಾರದಲ್ಲಿ ಗಲಾಟೆ: ಅಕ್ಕನ ತಲೆಗೆ ದೊಣ್ಣೆಯಿಂದ ಹಲ್ಲೆಗೈದ ತಂಗಿ

ಟ್ರೆಂಡಿಂಗ್
share whatsappshare facebookshare telegram
18 Oct 2022
post image

ಕೋಟ:

ಪಡಿತರ ಅಕ್ಕಿ‌ ವಿಚಾರಕ್ಕೆ ಸಂಬಂಧಿಸಿದಂತೆ ತಂಗಿ ಅಕ್ಕನಿಗೆ ಮರದ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆಗೈದ ಘಟನೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದಲ್ಲಿ ಅ.17ರಂದು ಬೆಳಿಗ್ಗೆ 11ಗಂಟೆಗೆ ನಡೆದಿದೆ. ವಡ್ಡರ್ಸೆ ಗ್ರಾಮದ ಜ್ಯೋತಿ ಎಂಬವರ ಮೇಲೆ ಹಲ್ಲೆ ನಡೆದಿದೆ. ಇವರ ತಂಗಿ ಆಶಾ ಎಂಬವರು ಹಲ್ಲೆ ನಡೆಸಿದ ಆರೋಪಿ. ಇವರು ಗಂಡ ಹಾಗೂ ಮಕ್ಕಳೊಂದಿಗೆ ತಾಯಿ ಮನೆಯ ಸಮೀಪದಲ್ಲೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ತನ್ನ ಪಾಲಿಗೆ ಬರುವ ಪಡಿತರ ಅಕ್ಕಿಯನ್ನು ಕೇಳಲು ತಾಯಿ ಮನೆಗೆ ಬಂದಿದ್ದಾರೆ. ಆಗ ತಾಯಿ ಕೆಲಸಕ್ಕೆ ಹೋಗಿದ್ದು, ತಂಗಿ ಆಶಾ ಮನೆಯಲ್ಲಿದ್ದರು. ಆಕೆಯ ಬಳಿ ಜ್ಯೋತಿ ಅವರು ತನ್ನ ಪಾಲಿನ ಪಡಿತರ ಅಕ್ಕಿ ನೀಡುವಂತೆ ಕೇಳಿದ್ದಾರೆ. ಆಗ ತಂಗಿ ಆಶಾ ಮತ್ತು ಜ್ಯೋತಿ ಅವರ ಮಧ್ಯೆ ವಾಗ್ವಾದ ನಡೆದಿದ್ದು, ಆಶಾ ಅವರು ಹಿಂದಿನಿಂದ ಬಂದು ಮರದ ದೊಣ್ಣೆಯಿಂದ ಜ್ಯೋತಿ ಅವರ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಇದರಿಂದ ಜ್ಯೋತಿ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅಲ್ಲಿಯೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಗಂಡ ಆ್ಯಂಬುಲೆನ್ಸ್ ನಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಿದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ಧಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜ್ಯೋತಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.