logo
WhatsApp Image 2026-04-02 at 14.46.04.jpeg
hindalco everlast.jpeg

ಕೋಟ: ಸ್ಕೂಟರ್ ಸ್ಕಿಡ್ ಆಗಿ ಯುವತಿಗೆ ಗಂಭೀರ ಗಾಯ

ಟ್ರೆಂಡಿಂಗ್
share whatsappshare facebookshare telegram
9 Oct 2022
post image

ಕೋಟ: ನಿಯಂತ್ರಣ ತಪ್ಪಿ ರಸ್ತೆಯಲ್ಲಿ‌ ಸ್ಕೂಟರ್ ಸ್ಕಿಡ್ ಆದ ಪರಿಣಾಮ ಯುವತಿಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ಯಡ್ತಾಡಿ ಗ್ರಾಮದ ಸಾಯಿಬ್ರಕಟ್ಟೆಯ ಜಂಬೂರು ಎಂಬಲ್ಲಿ ನಡೆದಿದೆ. ಗಾಯಗೊಂಡ ಯುವತಿಯನ್ನು 20ವರ್ಷದ ಮೇರಿ ಎಂದು ಗುರುತಿಸಲಾಗಿದೆ. ಇವರು ಕಾರ್ತಿಕ್ ಎಂಬಾತನೊಂದಿಗೆ ಸ್ಕೂಟರ್ ನಲ್ಲಿ ಸಹಸವಾರೆಯಾಗಿ ಬನ್ನೇರಳಕಟ್ಟೆ ಕಡೆಯಿಂದ ಸಾಯಿಬ್ರಕಟ್ಟೆ ಕಡೆಗೆ ಹೋಗುತ್ತಿದ್ದರು. ಸಾಯಿಬ್ರಕಟ್ಟೆಯ ಜಂಬೂರು ಎಂಬಲ್ಲಿ ಸ್ಕೂಟರ್ ಸ್ಕಿಡ್ ಆಗಿದ್ದು, ಇದರಿಂದ ಮೇರಿ ಅವರ ಚೂಡಿದಾರದ ವೇಲ್ ಸ್ಕೂಟರ್ ಗೆ ಸಿಕ್ಕಿ ಅವರು ರಸ್ತೆಗೆ ಎಸೆಯಲ್ಪಟ್ಟರು. ಇದರ ಪರಿಣಾಮ ತಲೆಗೆ ತೀವ್ರ ತರದ ಗಾಯವಾಗಿದ್ದು, ಅವರನ್ನು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ‌. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.