



ಕಾರ್ಕಳ : ಇತಿಹಾಸ ಪ್ರಸಿದ್ಧ ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.7 ರಂದು ವೈಭವದ ಹಸಿರು ಹೊರೆ ಕಾಣಿಕೆ ಕಾರ್ಯಕ್ರಮ ನಡೆಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಿದರು.ಬಂಡಿ ಮಠದಿಂದ ಹೊರಟ ಮೆರವಣಿಗೆ ಮೂರುಮಾರ್ಗವಾಗಿ ಕಾರ್ಕಳ ಪೇಟೆ ಪರಿಸರವಾಗಿ ಶ್ರೀ ಮಾರಿಗುಡಿ ಕ್ಷೇತ್ರವನ್ನು ತಲುಪಿತು
ವಿವಿಧ ಕಲಾಮೇಳಗಳು ಕಂಗೀಲು ನೃತ್ಯ ತಂಡ, ಕೇರಳ ಚೆಂಡೆ ಬಳಗ, ನಾಸಿಕ್ ಬ್ಯಾಂಡ್, ಹುಲಿ ವೇಷ, ಮರ ಕಾಲಿನ ಕುಣಿತ, ಡೊಳ್ಳು ವಾದನ, ಕಹಳೆ ಸೇರಿದಂತೆ, ಭಜನ ತಂಡಗಳು, ಕೀಲು ಕುದುರೆ , ಸಾಲು ಸಾಲು ನೂರಾರು ವಾಹನಗಳು ಭಾಗವಹಿಸಿದ್ದವು. .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.