



ಬೆಂಗಳೂರು: ಕರ್ನಾಟಕದಲ್ಲಿ 2023 - 24ನೇ ಸಾಲಿನ ಶೈಕ್ಷಣಿಕ ಅವಧಿಯಂತೆ ಇಂದಿನಿಂದ (ಮೇ 31) ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿದ್ದು, ಬೇಸಿಗೆ ರಜೆಯನ್ನು ಮುಗಿಸಿಕೊಂಡು ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೆಎಸ್ ಆರ್‌ಟಿಸಿ, ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿಯನ್ನು ಜೂನ್ 15ರ ವರೆಗೂ ಹಳೆಯ ವಿಸ್ತರಣೆ ಮಾಡಿದ್ದಾರೆ. ಸದ್ಯ ಈ ಆದೇಶವನ್ನು ಬುಧವಾರದಿಂದ ಜಾರಿ ಮಾಡಿದ್ದು, ಇದು ರಾಜ್ಯದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ ಎನ್ನಲಾಗಿದೆ. ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದ ಪಾಸುಗಳನ್ನೇ ಬಸ್‌ಗಳಲ್ಲಿ ತೋರಿಸಿಕೊಂಡು ಪ್ರಯಾಣ ಮಾಡಬಹುದು. ಪಾಸ್ ಇಲ್ಲದಿದ್ರೆ ಪ್ರಸಕ್ತ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಬೇಕೆಂದು ಕೆಎಸ್ ಆರ್‌ಟಿಸಿ ತನ್ನ ಆದೇಶದಲ್ಲಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.