


ಬೆಂಗಳೂರು: ಬಿಎಂಟಿಸಿ ಮಾಸಿಕ ಪಾಸ್ ದರ ಏರಿಕೆಯ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಕೂಡ ಮಾಸಿಕ ಬಸ್ ಪಾಸ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಗ್ರಾಮಾಂತರ ಭಾಗದ ವೇಗದೂತ, ತಡೆರಹಿತ ಹಾಗೂ ಸಾಮಾನ್ಯ ಬಸ್‌ಗಳ ಮಾಸಿಕ ಪಾಸ್‌ಗಳ ಜತೆಗೆ ಪ್ರಮುಖ ನಗರಗಳ ನಗರ ಸಾರಿಗೆ ಬಸ್ ಪಾಸ್ ದರವನ್ನೂ ಪರಿಷ್ಕರಿಸಲಾಗಿದೆ. ಇದರಿಂದ ನಿತ್ಯ ಬಸ್‌ಗಳಲ್ಲಿ ಪ್ರಯಾಣಿಸುವ ನೌಕರರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
ವೇಗದೂತ ಮತ್ತು ತಡೆರಹಿತ ಬಸ್‌ಗಳಲ್ಲಿ ಒಟ್ಟು 20 ಹಂತಗಳು ಹಾಗೂ ಸಾಮಾನ್ಯ ಬಸ್‌ಗಳಲ್ಲಿ 10 ಹಂತಗಳ ಆಧಾರದ ಮೇಲೆ ಮಾಸಿಕ ಪಾಸ್ ವಿತರಿಸಲಾಗುತ್ತದೆ. ಪರಿಷ್ಕೃತ ದರಗಳ ಪ್ರಕಾರ ಕನಿಷ್ಠ ಹಾಗೂ ಗರಿಷ್ಠ ಹಂತದ ಪಾಸ್ ದರಗಳಲ್ಲಿ ಗಣನೀಯ ಏರಿಕೆಯಾಗಿದೆ.
ವೇಗದೂತ ಮತ್ತು ತಡೆರಹಿತ ಬಸ್‌ಗಳ ಪಾಸ್ ದರ
ಸಾಮಾನ್ಯ ಬಸ್‌ಗಳ ಪಾಸ್ ದರ
ನಗರ ಸಾರಿಗೆ ಮಾಸಿಕ ಪಾಸ್ ದರವೂ ಹೆಚ್ಚಳ
ಮೈಸೂರು, ಮಂಗಳೂರು, ಹಾಸನ ಹಾಗೂ ತುಮಕೂರು ನಗರ ಸಾರಿಗೆ ಬಸ್‌ಗಳ ಮಾಸಿಕ ಪಾಸ್ ದರವನ್ನೂ ಪರಿಷ್ಕರಿಸಲಾಗಿದೆ.
| ನಗರ | ಪ್ರಯಾಣಿಕರು | ಹಳೆಯ ದರ | ಹೊಸ ದರ |
|---|---|---|---|
| ಮೈಸೂರು | ಸಾಮಾನ್ಯ | ₹810 | ₹990 |
| ಹಿರಿಯ ನಾಗರಿಕರು | ₹725 | ₹890 | |
| ಮಂಗಳೂರು | ಸಾಮಾನ್ಯ | ₹750 | ₹920 |
| ಹಿರಿಯ ನಾಗರಿಕರು | ₹675 | ₹830 | |
| ಹಾಸನ | ಸಾಮಾನ್ಯ | ₹690 | ₹850 |
| ಹಿರಿಯ ನಾಗರಿಕರು | ₹620 | ₹760 | |
| ತುಮಕೂರು | ಸಾಮಾನ್ಯ | ₹635 | ₹780 |
| ಹಿರಿಯ ನಾಗರಿಕರು | ₹570 | ₹700 |
ಈಗಾಗಲೇ ಟಿಕೆಟ್ ದರ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರಿಗೆ ಮಾಸಿಕ ಪಾಸ್ ದರ ಹೆಚ್ಚಳ ಮತ್ತಷ್ಟು ಹೊರೆಯಾಗಿದೆ. ನಿತ್ಯ ಬಸ್ ಪ್ರಯಾಣವನ್ನೇ ಅವಲಂಬಿಸಿರುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರ ಮಾಸಿಕ ಪ್ರಯಾಣ ವೆಚ್ಚ ಹೆಚ್ಚಾಗಲಿದ್ದು, ದರ ಏರಿಕೆಯ ಕುರಿತು ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.