



ಅಜ್ಮನ್: ಅರಬ್ ರಾಷ್ಟ್ರ ದ ಕುಂದಾಪುರ ಕನ್ನಡಿಗರು ಸೇರಿದ ಕಟ್ಟಿದ ನಮ್ಮ ಕುಂದಾಪುರ ಕನ್ನಡ ಬಳಗ ಗಲ್ಪ್ ಸಂಘಟನೆಯ ವತಿಯಿಂದ ಅಜ್ಮನ್ ಹೆಬಿಟೆಟ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕುಂದಗನ್ನಡ ಉತ್ಸವ ೨೦೨೩ - ಕುಂದಾಪುರ ರತ್ನ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನ ಸಮಾರಂಭ ಯಶಸ್ವಿಯಾಗಿ ಜರುಗಿತು.
ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಮಂದರ್ತಿ ಮೂಲದ ಉದ್ಯಮಿ ವಿಶ್ವನಾಥ್ ಹೆಗ್ಡೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಲ್ಫ್ ರಾಷ್ಟ್ರದಲ್ಲಿರುವ ಕುಂದಗನ್ನಡಿಗರ ಸಾಧನೆ ಮತ್ತು ಪರಿಶ್ರಮ ಜಗತ್ತಿಗೆ ಮಾದರಿಯಾಗಿದೆ. ವೃತ್ತಿ ಬದುಕಿನ ಜೊತೆಗೆ ತಾಯಿನೆಲದ ಅಭಿಮಾನ ಹಾಗೂ ಸಂಘಟಿತ ಶ್ರಮದ ಮೂಲಕ ಕುಂದಾಪುರದ ಜನತೆಗೆ ನೆರವಾಗುವ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಸಂಘಟನೆಯು ಕುಂದಾಪುರದ ಹೆಮ್ಮೆ ಎಂದರು.
ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್ ಮಾತನಾಡಿ, ಕುಂದಾಪುರ ಕನ್ನಡ ಬಳಗ ಗಲ್ಪ್ ರಾಷ್ಟçದಲ್ಲಿ ಕುಂದಗನ್ನಡಗರಿಗೆ ಧ್ವನಿಯಾಗುವ ಜೊತೆಗೆ ಪ್ರತಿ ವರ್ಷ ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ಗ್ರಾಮೀಣ ಶಾಲೆಗಳಿಗೆ ಕೊಡುಗೆ, ಸಾಧಕರಿಗೆ ಸನ್ಮಾನ ದುಬೈನಲ್ಲಿ ಕುಂದಗನ್ನಡಗರ ಸಮಸ್ಯೆಗಳಿಗೆ ಸ್ಪಂದನೆ ಸೇರಿದಂತೆ ನಿರಂತರ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕುಂದಗನ್ನಡ ಉತ್ಸವದ ಮೂಲಕ ಅದ್ದೂರಿಯ ಕುಂದಾಪುರ ಕನ್ನಡಿಗ ಸಮ್ಮಿಲನ ಕಾರ್ಯಕ್ರಮ ದುಬೈನಲ್ಲಿ ಯಶಸ್ವಿಯಾಗಿ ಸಾಕಾರಗೊಂಡಿದೆ ಎಂದರು.
ಕುಂದಾಪ್ರ ರತ್ನ ಪ್ರಶಸ್ತಿ ಪ್ರದಾನ: ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಾಧಕರಿಗೆ ಕುಂದಾಪುರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಾಟಿ ವೈದ್ಯ ಮ್ಯಾಕ್ಸಿಮ್ ಓಲಿವೆರ ಹಾಗೂ ಪ್ರಾಣ ರಕ್ಷಕ ಸಂಜೀವ ದೇವಾಡಿಗ ಅವರನ್ನು ಕುಂದಾಪುರ ರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.
ಮಂದಾರ್ತಿ ಮೇಳದ ಯಕ್ಷಗಾನ: ಗಲ್ಫ್ ರಾಷ್ಟçಕ್ಕೆ ಮೊದಲ ಭಾರಿಗೆ ಮಂದಾರ್ತಿ ಮೇಳವನ್ನು ಆಮಂತ್ರಿಸಿ ಪ್ರದರ್ಶನ ಆಯೋಜಿಸಲಾಗಿತ್ತು. ಉತ್ಸವದಲ್ಲಿ ಪಾಪಣ್ಣ ವಿಜಯ ಗುಣಸುಂದರಿ ಯಕ್ಷಗಾನ ಅದ್ದೂರಿಯಾಗಿಪ್ರದರ್ಶನಗೊಂಡಿತು. ಇದೇ ವೇಳೆ ಉದ್ಯಮಿ ವಿಶ್ವನಾಥ್ ಹೆಗ್ಡೆ, ಗಲ್ಫ್ ರಾಷ್ಟçದಲ್ಲಿ ಭಗವದ್ಗೀತೆ ಪಠಣ ಅಭಿಯಾನ ಮಾಡಿದ ಸುದೇಶ್ ಬೈಂದೂರು ಮೊದಲಾದವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿವಿಧ ದೇಶದ ಪ್ರತಿನಿಧಿಗಳು ಭಾಗಿ: ನಮ್ಮ ಕುಂದಾಪ್ರ ಕನ್ನಡ ಬಳಗದ ವಿವಿಧ ದೇಶದ ಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮ ಕುಂದಾಪ್ರ ಕನ್ನಡ ಬಳಗ ಉಪಾಧ್ಯಕ್ಷ ದಿನೇಶ್ ದೇವಾಡಿಗ, ಕಾರ್ಯದರ್ಶಿ ಸುಧಾಕರ ಪೂಜಾರಿ, ಖಜಾಂಚಿ ಸುಜಿತ್ ಶೆಟ್ಟಿ, ಕರ್ನಾಟಕ ರಾಜ್ಯ ಅರಣ್ಯಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ ರಘುರಾಮ್ ದೇವಾಡಿಗ, ನಿವ್ರತ್ತ ಶಿಕ್ಷಕ ಹರೀಶ್ ಶೆಟ್ಟಿ, ಮಂದಾರ್ತಿ ದೇವಸ್ಥಾನದ ಸಚಿನ್ ಶೆಟ್ಟಿ, ಉದ್ಯಮಿ ವೆಂಕಟೇಶ್ ಕಿಣ , ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹಣ್ಯ ಹೆಬ್ವಾಗಿಲು, ಸೌದಿ ಅರೇಬಿಯಾ ಸಂತೋಷ ಶೆಟ್ಟಿ, ಓಮನ್ ದೇಶದ ರಮಾನಂದ ಪ್ರಭು, ಶೀನ ದೇವಾಡಿಗ ತ್ರಾಸಿ, ನಮ್ಮ ಕುಂದಾಪ್ರ ಕನ್ನಡ ಬಳಗದ ಪದಾದಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ಕುಂದಾಪ್ರ ಕನ್ನಡ ಬಳಗದ ವಿಘ್ನೇಶ್ ಸಾಂಸ್ಕçತಿಕ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು, ಆರತಿ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.