logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ 11 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ, ಹಾಗೂ ಶೇ.100 ಫಲಿತಾಂಶ.

ಟ್ರೆಂಡಿಂಗ್
share whatsappshare facebookshare telegram
16 May 2024
post image

ಕುಂದಾಪುರ: ಶಿಕ್ಷಣ ಜೀವನದ ಸಂಪತ್ತು ಎನ್ನುವುದನ್ನು ಅರಿತ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ, ಸದೃಢವಾದ, ಸುಸಂಸ್ಕೃತವಾದ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಬೇಕು ಎನ್ನುವ ಸದುದ್ದೇಶದಿಂದ ಅಭೂತಪೂರ್ವ ಜ್ಞಾನವನ್ನು ಧಾರೆಯೆರೆದು ಸೃಜನ ಶೀಲ ಶಿಕ್ಷಣದೊಂದಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದ್ಯಾರ್ಥಿ ಪ್ರತಿಭೆಗಳನ್ನು ಬೆಳೆಸುತ್ತಿರುವ ಅತ್ಯಂತ ಉನ್ನತವಾದ ಶಿಕ್ಷಣ ಸಂಸ್ಥೆ.

ಸಂಸ್ಥೆಯಲ್ಲಿ ವಿಜ್ಞಾನ ಹಾಗೂ ವ್ಯವಹಾರ ಅಧ್ಯಯನ ವಿಭಾಗದ ಶಿಕ್ಷಣ ಕ್ರಮ ನೀಡಲಾಗುತ್ತಿದ್ದು, ವಿಜ್ಞಾನ ವಿಭಾಗದಲ್ಲಿ PCMB, PCMC ಮತ್ತು PCMS, ವಾಣಿಜ್ಯ ವಿಭಾಗದಲ್ಲಿ EBAC, EBAS ಕೋರ್ಸ್ ಗಳು ಲಭ್ಯ ವಿದೆ.

ಕಾಲೇಜಿನ ವಿಶೇಷತೆಗಳು: *ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಚೇತೋಹಾರಿ ಶಿಕ್ಷಣ. *ವಿದ್ಯಾರ್ಥಿಗಳಿಗೆ ವಿದ್ಯೆಯ ಸಿರಿಯಾಗಿ, ಪಠ್ಯ, ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆ ಗಳ ಸರಸ್ವತಿಯ ಮಂದಿರ. *ಸಾರ್ವಕಾಲಿಕ ದಾಖಲೆಯ ದ್ವಿತೀಯ ಪಿಯುಸಿ ಫಲಿತಾಂಶ. *100% ಫಲಿತಾಂಶದ ನಿರೀಕ್ಷೆಯಲ್ಲಿ ಸತತ ಬೋಧನೆ.

  • ಪರಿಣಿತ ತಜ್ಞರಿಂದ CET , NEET , JEE ಹಾಗೂ CA ಕೋರ್ಸ್ ಗಳಿಗೆ ಕಾಲೇಜು ಅವಧಿಯಲ್ಲಿ ತರಬೇತಿ. *ವಿದ್ಯಾರ್ಥಿಗಳ ಜ್ಞಾನ ವರ್ಧನೆಗೆ ಗ್ರಂಥಾಲಯ ವ್ಯವಸ್ಥೆ. *ವಿದ್ಯಾರ್ಥಿಗಳ ಜ್ಞಾನ ಕೌಶಲವನ್ನು ಗಟ್ಟಿ ಗೊಳಿಸಲು ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ.
  • ಸಂತಸದ ಕಲಿಕೆಗೆ ಉತ್ತಮ ಪರಿಸರ. *ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನದ ಸಮರ್ಥ ಬಳಕೆ.
  • ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ
  • ಪೋಷಕರ ಹಾಗೂ ಶಿಕ್ಷಕರ ನಿರಂತರ ಸಂಪರ್ಕ
  • ಸರಕಾರ ಮತ್ತು ಸಂಘ ಸಂಸ್ಥೆ ಗಳಿಂದ ದೊರೆಯುವ ವಿವಿಧ ವಿದ್ಯಾರ್ಥಿ ವೇತನ.
  • ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ವೈಯಕ್ತಿಕ ಗಮನ ಮತ್ತು ಆಪ್ತ ಸಮಾಲೋಚನೆ.
  • ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಗಳಿಗೆ ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿ.
  • ಕಲಿಕೆಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ Bussinss day, Industrial visit.
  • ಮಧ್ಯಾಹ್ನ ದ ಭೋಜನ ವ್ಯವಸ್ಥೆ. ಇನ್ನು ಹತ್ತು ಹಲವು ವಿಶೇಷತೆಗಳು ಸಂಸ್ಥೆಯು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ.

ಸತತ ದಾಖಲೆಯ ಫಲಿತಾಂಶ: 2023 - 24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ 11 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ ದೊರಕಿದೆ. ವಾಣಿಜ್ಯ ವಿಭಾಗದಲ್ಲಿ ವಿನಯ್ ಶ್ಯಾನುಭಾಗ್ 593 ಅಂಕದೊಂದಿಗೆ ರಾಜ್ಯಕ್ಕೆ 5ನೇ ಸ್ಥಾನ ಪಡೆದು ತಾಲೂಕಿಗೆ ಪ್ರಥಮ ಸ್ಥಾನ. ವಿಜ್ಞಾನ ವಿಭಾಗದಲ್ಲಿ ಶ್ರೀಲಕ್ಷ್ಮಿ ಹೆಬ್ಬಾರ್ 593 ಅಂಕದೊಂದಿಗೆ ರಾಜ್ಯಕ್ಕೆ 6 ನೇ ಸ್ಥಾನ ಪಡೆದು ತಾಲೂಕಿಗೆ ಪ್ರಥಮ ಸ್ಥಾನ. ಈ ಇಬ್ಬರು ವಿದ್ಯಾರ್ಥಿಗಳು ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಪ್ರಥಮ ಸ್ಥಾನಿಗಳಾಗಿ ಅಭೂತಪೂರ್ವ ಸಾಧನೆ ಮೆರೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಸಂಜನಾ ಹಾಗೂ ಮಾನ್ಯ 592 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 7 ನೇ ರ್ಯಾಂಕ್, ಸುಜಯಾ ಎಚ್‌ ಮತ್ತು ಅನಿರುದ್ದ್‌ ಶೇಟ್‌ 591 ಅಂಕಗಳೊಂದಿಗೆ 8 ನೇ rank , ಪೂಜಾ ಕಾರಂತ 590 ಅಂಕಗಳೊಂದಿಗೆ 9ನೇ rank , ನಮ್ರತಾ 589 ಅಂಕಗಳೊಂದಿಗೆ 10 ನೇ ರ್ಯಾಂಕ್ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಆಯೇಷಾ ಮುಸ್ಕಾನ್ ಮತ್ತು ಸಿಂಚನಾ 590 ಅಂಕಗಳೊಂದಿಗೆ 8ನೇ ರ್ಯಾಂಕ್, ಶ್ರದ್ದಾ 588 ಅಂಕಗಳೊಂದಿಗೆ 10 ನೇ ರ್ಯಾಂಕ್ ಪಡೆದು ರಾಜ್ಯದ ಅಗ್ರ ಸ್ಥಾನಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

229 ವಿದ್ಯಾರ್ಥಿಗಳು ಹಾಜರಾಗಿದ್ದು , ಡಿಸ್ಟಿಂಕ್ಷನ್‌ ನಲ್ಲಿ 182 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಂಪ್ಯೂಟರ್‌ ಸೈನ್ಸ ನಲ್ಲಿ 20, ಸಂಸ್ಕ್ರತದಲ್ಲಿ 19, ಗಣಿತಶಾಸ್ತ್ರ ದಲ್ಲಿ 16, ರಸಾಯನ ಶಾಸ್ತ್ರ ದಲ್ಲಿ 07, ಲೆಕ್ಕಶಾಸ್ತ್ರ ದಲ್ಲಿ 05 ,ಕನ್ನಡದಲ್ಲಿ 04, ಸಂಖ್ಯಾಶಾಸ್ತ್ರದಲ್ಲಿ 03, ಜೀವಶಾಸ್ತ್ರದಲ್ಲಿ 03, ಅರ್ಥಶಾಸ್ತ್ರ ದಲ್ಲಿ 02 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. 2017 - 18 ರಿಂದ ನಮ್ಮ ಕಾಲೇಜು ರಾಜ್ಯ ಮಟ್ಟದಲ್ಲಿ ಇದುವರೆಗೆ 44 ರ್ಯಾಂಕ್ಗಳನ್ನು ಪಡೆಯುವುದರ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿ ಮೂಡಿಸುತ್ತಿದೆ.

ಕೇವಲ ಯಾಂತ್ರಿಕವಾಗಿ ಪಾಠ ಬೋಧಿಸುವ ಶಿಕ್ಷಕರಿಗಿಂತ, ವಿದ್ಯಾರ್ಥಿಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಅವರ ಬಂಧನವನ್ನು ನೀಗಿಸಿ ವಿದ್ಯಾರ್ಥಿಗಳ ಕಷ್ಟದಲ್ಲಿ ಭಾಗಿಯಾಗಿ ಸಹಾಯ ಮಾಡುವ ಸ್ನೇಹಿತರಾಗಿ, ಜೀವನದ ನಿಜವಾದ ಮಾರ್ಗ ಕಂಡು ಕೊಳ್ಳಲು ಸಹಾಯ ಮಾಡುವ ಮಾರ್ಗದರ್ಶಕರಿರುವ ಸಂಸ್ಥೆ. ಶ್ರೀ ವೆಂಕಟರಮಣ ವಿದ್ಯಾ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳ ದಾರಿದೀಪವಾಗಿ ಅವಕಾಶಗಳ ಸ್ವರ್ಗವನ್ನು ಸೃಷ್ಟಿಸುತ್ತಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.