logo
WhatsApp Image 2026-04-02 at 14.46.04.jpeg
hindalco everlast.jpeg

ಕುಂದಾಪುರ: ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ವ್ಯಕ್ತಿ ಮೃತ್ಯು..!

ಟ್ರೆಂಡಿಂಗ್
share whatsappshare facebookshare telegram
14 Sept 2024
post image

ಕುಂದಾಪುರ: ಸಮುದ್ರದಲ್ಲಿ ಮೀನುಗಾರಿಕೆ ಮಾಡುತಿದ್ದ ವೇಳೆ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದು, ಮೀನುಗಾರರೊಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.

ಮೃತರನ್ನು ಶೇಷು (61) ಎಂದು ಗುರುತಿಸಲಾಗಿದೆ.

ಶೇಷು ಅವರು ಕೋಡಿಯ ಪ್ರದೀಪ್ ಅವರ ಫಿಶಿಂಗ್ ಬೋಟ್‌ನಲ್ಲಿ ಮೀನುಗಾರಿಕೆ ಮಾಡುತಿದ್ದಾಗ 8.15ರ ಸುಮಾರಿಗೆ ಆಯತಪ್ಪಿ ಸಮುದ್ರದ ನೀರಿಗೆ ಬಿದ್ದಿದ್ದರು. ತಕ್ಷಣ ಬೋಟಿನಲ್ಲಿದ್ದ ಇತರರು ಅವರನ್ನು ಎತ್ತಿ ಅಂಬುಲೆನ್ಸ್‌ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.