logo
WhatsApp Image 2026-04-02 at 14.46.04.jpeg
hindalco everlast.jpeg

ಕುಂದಾಪುರ: ಮದ್ಯಪಾನ ಮಾಡಲು ಹಣ ಸಿಗದೆ ವ್ಯಕ್ತಿ ನೇಣಿಗೆ ಶರಣು

ಟ್ರೆಂಡಿಂಗ್
share whatsappshare facebookshare telegram
20 Aug 2022
post image

ಕುಂದಾಪುರ: ಮದ್ಯಪಾನ ಮಾಡಲು ಹಣ ಸಿಗದೆ ಮನನೊಂದ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ‌ ಕೆಂಚನೂರು ಗ್ರಾಮದ ಹಕ್ಲಮನೆ ಎಂಬಲ್ಲಿ ಆ.19ರಂದು ಸಂಜೆ ನಡೆದಿದೆ. ಕೆಂಚನೂರು ಗ್ರಾಮದ ಹಕ್ಲಮನೆ ನಿವಾಸಿ 52 ವರ್ಷದ ಮೋಹನ ಶೆಟ್ಟಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಿನ್ನೆ ಮನೆಯವರು ಎಲ್ಲರೂ ಶೃಂಗೇರಿಗೆ ಹೋಗಿದ್ದು, ಮೋಹನ ಶೆಟ್ಟಿ ಹೋಗಲು ಒಪ್ಪದೆ ಮನೆಯಲ್ಲೆ ಉಳಿದಿದ್ದರು. ಶೃಂಗೇರಿಗೆ ತೆರಳಿದ್ದ ಮೋಹನ‌ ಶೆಟ್ಟಿಯ ಮಗ ಗಣೇಶ ಶೆಟ್ಟಿ ಅವರಿಗೆ ನಿನ್ನೆ ಸಂಜೆ ನೆರಮನೆಯ ಉದಯ ಶೆಟ್ಟಿ ಎಂಬವರು ಕರೆ ಮಾಡಿ, ನಿಮ್ಮ ತಂದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅದರಂತೆ ಸಂಜೆ 7.30ಕ್ಕೆ ಬಂದು ನೋಡಿದಾಗ ಮನೆಯ ಜಂತಿಗೆ ಸ್ಕರ್ಟನ್ ಬಟ್ಟೆಯಿಂದ ನೇಣು ಬಿಗಿದುಕೊಂಡು ಮೋಹನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಮದ್ಯಪಾನ ಮಾಡಲು ಹಣದ ಅಡಚಣೆಯಾದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಮಗ ಗಣೇಶ್ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ. .  

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.