



ಕುಂದಾಪುರ: ತಾಲೂಕಿನ ವಂಡ್ಸೆ ಹೋಬಳಿಯ ಕೆಂಚನೂರು ಗ್ರಾಮದ ಮಲ್ಲಾರಿ ಎಂಬಲ್ಲಿ ರವಿವಾರ ಸಂಜೆ ವೇಳೆ ಸುರಿದ ಗಾಳಿ-ಮಳೆಗೆ ಮರಗಳು ಬುಡ ಸಮೇತ ಉರುಳಿ ಬಿದ್ದು ಮಹಿಳೆ ಹಾಗೂ ಅವರು ಮನೆಗೆ ಕರೆತರುತಿದ್ದ ದನವೊಂದು ಅದರಡಿ ಸಿಲುಕಿ ಮೃತಪಟ್ಟ ಧಾರುಣ ಘಟನೆ ನಡೆದಿದೆ.
ಮೃತರನ್ನು ಮಲ್ಲಾರಿಯ ಅಣ್ಣಪ್ಪಯ್ಯ ಎಂಬವರ ಪತ್ನಿ ಸುಜಾತ ಆಚಾರ್ತಿ (53) ಎಂದು ಗುರುತಿಸಲಾಗಿದೆ.
ಸಂಜೆ 5:30ರ ಸುಮಾರಿಗೆ ಮಳೆ ಸುರಿಯತೊಡಗಿದ್ದು, ಸುಜಾತ ಮನೆ ಸಮೀಪದಲ್ಲೇ ಮೇಯಲೆಂದು ಕಟ್ಟಿ ಹಾಕಿದ್ದ ದನವನ್ನು ಬಿಡಿಸಿಕೊಂಡು ಮನೆಗೆ ಮರಳುತಿದ್ದಾಗ 2-3 ಮರಗಳು ಒಟ್ಟಿಗೆ ಅವರ ಮೇಲೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ಸ್ಥಳೀಯರು ಕೂಡಲೇ ಅವರನ್ನು ಕುಂದಾಪುರದ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಮರದಡಿ ಸಿಲುಕಿದ ದನವೂ ಸ್ಥಳದಲ್ಲೇ ಮೃತಪಟ್ಟಿವೆ ಎಂದು ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ತಿಳಿಸಿದ್ದಾರೆ.
ಸುಜಾತ ಆಚಾರ್ತಿ ಅವರು ಪತಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.