



ಕುಂದಾಪುರ: ಸೌಪರ್ಣಿಕ ನದಿಯಲ್ಲಿ ಈಜಲು ಹೋದ ತರುಣ ನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾದ ಘಟನೆ ಕುಂದಾಪುರದ ವೊವಾಡಿ ಸೇತುವೆ ಸಮೀಪ ನಡೆದಿದೆ.ತ್ರಾಸಿಯ ಹೋಲಿಕ್ರಾಸ್ ಮಹೇಂದ್ರ (24) ನೀರುಪಾಲಾದ ಹುಡುಗ. ಸೌಪರ್ಣಿಕಾ ನದಿ ತೀರಕ್ಕೆ ಮಹೇಂದ್ರ, ಆಶಿಕ್ ಹಾಗೂ ಶರತ್ ತೆರಳಿದ್ದರು. ಮಹೇಂದ್ರ ಹಾಗೂ ಆಶಿಕ್ ನೀರಿಗೆ ಇಳಿದಿದ್ದು ಇನ್ನೋರ್ವ ಸ್ನೇಹಿತ ಶರತ್ ಸೇತುವೆ ಮೇಲೆ ನಿಂತು ವೀಕ್ಷಿಸುತ್ತಿದ್ದ. ಅದೇ ಸಂದರ್ಭದಲ್ಲಿ ನೀರಿನ ಸೆಳೆತ ಹೆಚ್ಚಾಗುತಿತ್ತು.ಆಶಿಕ್ ನನ್ನು ಸ್ಥಳೀಯರಾದ ರತ್ನಾಕರ್ ಕಾಂಚನ್ ಮತ್ತು ಯೋಗೇಂದ್ರ ಕಾಂಚನ್ ರಕ್ಷಿಸಿದ್ದಾರೆ. ನೀರುಪಾಲಾದ ಯುವಕನಿಗಾಗಿ ಅಗ್ನಿ ಶಾಮಕ ಸಿಬ್ಬಂದಿ, ಸ್ಥಳಿಯರು ಹುಡುಕಾಟ ನಡೆಸುತಿದ್ದಾರೆ. ಗಂಗೊಳ್ಲಿ ಠಾಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.