



ಕುಂದಾಪುರ: ಬೆಳ್ವೆಯ ಚರ್ಚ್ ಒಂದರಲ್ಲಿ ಫಾದರ್ ವಿರುದ್ದ ಚರ್ಚ್ ನ ಅನುಯಾಯಿಗಳು ಅಸಮಾಧಾನ ಹೊರಹಾಕಿ ಭಾನುವಾರ ಪ್ರತಿಭಟನೆ ನಡೆಸಿದರು
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರುಣಾಕರ್ ಶೆಟ್ಟಿ ಇದು ಕೇವಲ ಒಂದು ಧರ್ಮದ ವಿಚಾರವಲ್ಲ. ಸಾಮರಸ್ಯದಿಂದ ಇರುವ ಚರ್ಚಿನ ಅನುಯಾಯಿಗಳಿಗೆ ತೊಂದರೆ ಆದರೆ ಬೆಳ್ವೆ ಗ್ರಾಮದ ಪ್ರತಿಯೊಬ್ಬರು ಇವರ ಪರ ನಿಲ್ಲುತ್ತಾರೆ. ಇವರಿಗೆ ತೊಂದರೆ ನೀಡುತ್ತಿರುವ ಫಾದರ್ ಅಲೆಕ್ಸಾಂಡರ್ ಲೂವೀಸ್ ಈ ಹಿಂದೆ ತಲ್ಲೂರಿನಲ್ಲಿ ಗಲಾಟೆ ಮಾಡಿಕೊಂಡು ಬಂದು ಇಲ್ಲಿಗೆ ವರ್ಗಾವಣೆಗೊಂಡವರು. ಇಲ್ಲಿಯೂ ಅದೇ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದರು.
ಚರ್ಚ್ ನ ಅನುಯಾಯಿ ಪ್ರವೀಣಾ ಮಾತನಾಡಿ ಕಳೆದ ಮೂರು ತಿಂಗಳಿನಿಂದ ಇಲ್ಲಿ ಅಶಾಂತಿ ನೆಲೆಸಿದೆ. ಫಾದರ್ ಅಲೆಗ್ಸಾಂಡರ್ ಲೂವಿಸ್ ನಮಗೆ ಚರ್ಚ್ ನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುತ್ತಿಲ್ಲ. ನಾವು ಕಟ್ಟಿದ ಚರ್ಚ್ ನ ಕಟ್ಟಡಕ್ಕೆ ಹಾನಿ ಮಾಡುತ್ತಿದ್ದಾರೆ. ಉಡುಪಿ ಧರ್ಮಾಧ್ಯಕ್ಷರಿಗೆ ಮನವಿ ಮಾಡಿದರೇ ನಮಗೆ ನ್ಯಾಯ ದೊರಕಿಸಿ ಕೊಡಲಿಲ್ಲ. ಒಂದು ವೇಳೆ ವಾರದೊಳಗೆ ಅಲೆಗ್ಸಾಂಡರ್ ಅನ್ನು ವರ್ಗಾವಣೆ ಮಾಡದೇ ಇದ್ದರೇ ನಾವು ಕ್ರಿಶ್ಚಿಯನ್ ಧರ್ಮವನ್ನು ಬಿಟ್ಟು ಹೋಗುತ್ತೇವೆ ಎಂದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.