



ಕುಂದಾಪುರ: ಕುಂದಾಪುರ ತಾಲೂಕಿನ ಕಂಡೂರಿನಲ್ಲಿ ಗಂಡ ಹೆಂಡತಿ ಪರಸ್ಪರ ಜಗಳ ಮಾಡಿಕೊಂಡ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಳಿಕ ಪತಿ ನದಿಗೆ ಹಾರಿ ಆತ್ಮಹತ್ಯೆ ಯತ್ನಿಸಿ ನಾಪತ್ತೆಯಾಗಿದ್ದ ಘಟನೆ ಮಂಗಳವಾರ ನಡೆದಿದ್ದು, ಇದೀಗ ನಾಪತ್ತೆಯಾಗಿದ್ದ ಹರೀಶ್ (44) ಕಾಳಾವರ ಅವರ ಶವ ಗುಲ್ವಾಡಿ ಅಣೆಕಟ್ಟಿನ ಬಳಿ ಗುರುವಾರ ಪತ್ತೆಯಾಗಿದೆ.
ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿ ಬೋಟಿನಲ್ಲಿ, ಸ್ಥಳೀಯ ಶೌರ್ಯ ತಂಡದ ಸದಸ್ಯರು, ಮುಳುಗು ತಜ್ಞ ಈಶ್ವರ್ ಮಲ್ಪೆ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಂಡ್ಲೂರಿನಿಂದ ಗುಲ್ವಾಡಿ, ಬಸ್ರೂರು, ಆನಗಳ್ಳಿ, ಸಂಗಮ್ ಸೇತುವೆಯವರೆಗೂ ಹುಡುಕಲಾಗಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.