logo
WhatsApp Image 2026-04-02 at 14.46.04.jpeg
hindalco everlast.jpeg

ಕುಂದಾಪುರ: ಪತ್ನಿಯೊಂದಿಗೆ ಜಗಳವಾಡಿ ನೇಣಿಗೆ ಶರಣಾದ ಪತಿ.!

ಟ್ರೆಂಡಿಂಗ್
share whatsappshare facebookshare telegram
5 Sept 2022
post image

ಕುಂದಾಪುರ:

ವಿಪರೀತ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಬಗ್ವಾಡಿ ಕ್ರಾಸ್ ಬಳಿ ದೇವಲ್ಕುಂದ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ದೇವಲ್ಕುಂದ ಗ್ರಾಮದ ನಿವಾಸಿ ರತ್ನಾಕರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಉಡುಪಿಯ ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಕುಡಿಯುವ ಚಟವನ್ನು ಹೊಂದಿದ್ದರು. ನಿನ್ನೆ ರಾತ್ರಿ ವಿಪರೀತ ಮದ್ಯಸೇವಿಸಿ ಮನೆಗೆ ಬಂದಿದ್ದು, ಪತ್ನಿ ಇಂದಿರಾ ಅವರೊಂದಿಗೆ ಜಗಳವಾಡಿದ್ದರು. ಇದರಿಂದ ಹೆದರಿದ ಇಂದಿರಾ ಅವರು, ತನ್ನ ತಾಯಿಯ ಮನೆಗೆ ಹೋಗಿದ್ದರು. ಇಂದು ಬೆಳಿಗ್ಗೆ ಮನೆಗೆ ಬಂದು ನೋಡುವಾಗ ಗಂಡ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.