



ಕುಂದಾಪುರ: ಮೀನುಗಾರಿಕೆಯ ವೇಳೆ ಬೃಹತ್ ಗಾತ್ರದ ಕಡಲಾಮೆಗಳೆರಡು ಕೈರಂಪಣಿ ಬಲೆಗೆ ಬಿದ್ದಿದ್ದು, ಮೀನುಗಾರರು ವಾಪಾಸು ಸಾಗರದಾಳಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಕುಂದಾಪುರ ತಾಲೂಕಿನ ಎಂ. ಕೋಡಿ ಸಮೀಪ ಸಮುದ್ರದಲ್ಲಿ ಎರಡು ಕಡಲಾಮೆಗಳು ಮೀನುಗಾರರ ಬಲೆಗೆ ಸೆರೆ ಸಿಕ್ಕಿದ್ದವು. ಬ್ರಹ್ಮಲಿಂಗೇಶ್ವರ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು 40 ಕೆಜಿ, ಭಾರದ ಹಾಗೂ 20 ಕೆಜಿ ತೂಕದ ಎರಡು ಕಡಲಾಮೆಗಳು ಸಿಕ್ಕಿ ಹಾಕಿಕೊಂಡಿದ್ದವು.
ಬಲೆ ಮೇಲಕ್ಕೆತ್ತಿದ್ದಾಗ ಕಡಲಾಮೆಗಳು ಸಿಕ್ಕಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಮೀನುಗಾರರಾದ ಪ್ರವೀಣ್ ಖಾರ್ವಿ, ಸಚಿನ್ ಮೇಸ್ತ, ನಿತೀಶ್ ಖಾರ್ವಿ, ಅರ್ಜುನ್ ಖಾರ್ವಿ ಹಾಗೂ ಕೃಷ್ಣ ಖಾರ್ವಿ ಮೊದಲಾದವರು ಕಡಲಾಮೆಗಳನ್ನು ಬಲೆಯಿಂದ ಬಿಡಿಸಿ ಮತ್ತೆ ಸಮುದ್ರದ ಒಡಲಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಕಡಲಾಮೆಗಳನ್ನು ರಕ್ಷಿಸಿದ ಮೀನುಗಾರರ ಮಾನವೀಯತೆ ಜನ ಹ್ಯಾಟ್ಸಾಫ್ ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.