logo
WhatsApp Image 2026-04-02 at 14.46.04.jpeg
hindalco everlast.jpeg

ಕುಂದಾಪುರ: ಆಟೊ ನಿಲ್ದಾಣ ಕ್ಕೆ ನುಗ್ಗಿದ ಟಿಪ್ಪರ್ 4 ಆಟೋ ಜಖಂ

ಟ್ರೆಂಡಿಂಗ್
share whatsappshare facebookshare telegram
30 Nov 2021
post image

ಕುಂದಾಪುರ: ಟಿಪ್ಪರ್ ಲಾರಿಯೊಂದು ಆಟೊ ನಿಲ್ದಾಣಕ್ಕೆ ನುಗ್ಗಿದ ಪರಿಣಾಮ ನಾಲ್ಕು ಆಟೊಗಳು ಜಖಂಗೊಂಡ ಘಟನೆ ಇಂದು ಮಧ್ಯಾಹ್ನ ಕುಂದಾಪುರ ತ್ರಾಸಿ ಸಮೀಪದ ಮುಳ್ಳಿಕಟ್ಟೆ ಕ್ರಾಸ್ ಬಳಿ ನಡೆದಿದೆ. ಟಿಪ್ಪರ್ ಚಾಲಕ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದನು.‌ ಚಾಲಕ ಮುಳ್ಳಿಕಟ್ಟೆ ಕ್ರಾಸ್ ಬಳಿ ತಿರುವು ತೆಗೆದುಕೊಂಡ ವೇಳೆ ನಿಯಂತ್ರಣ ತಪ್ಪಿ ಟಿಪ್ಪರ್ ಬದಿಯಲ್ಲಿರುವ ಆಟೋ ಸ್ಟ್ಯಾಂಡ್ ಒಳಕ್ಕೆ ನುಗ್ಗಿದೆ. ಪರಿಣಾಮ ಪಾರ್ಕಿಂಗ್ ನಲ್ಲಿದ್ದ 4 ಆಟೋಗಳು ನಜ್ಜುಗುಜ್ಜಾಗಿವೆ. ಆಟೋ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಟಿಪ್ಪರ್ ಚಾಲಕನ ಅಜಾಗರೂಕತೆ, ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನ ಕಾರಣ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪಿಎಸ್ಐ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.