logo
WhatsApp Image 2026-04-02 at 14.46.04.jpeg
hindalco everlast.jpeg

ಕುಂದಾಪುರ: ಅನಾರೋಗ್ಯದಿಂದ ಬೇಸತ್ತ ವ್ಯಕ್ತಿ ನೇಣಿಗೆ ಶರಣು

ಟ್ರೆಂಡಿಂಗ್
share whatsappshare facebookshare telegram
24 Nov 2022
post image

ಕುಂದಾಪುರ: ಅನಾರೋಗ್ಯದಿಂದ ಬೇಸತ್ತ ವ್ಯಕ್ತಿಯೋರ್ವರು‌ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಶೇಡಿಮನೆ ಗ್ರಾಮದಲ್ಲಿ ನ.23ರಂದು 5.30 ಕ್ಕೆ ನಡೆದಿದೆ. ಶೇಡಿಮನೆ ಗ್ರಾಮದ 54ವರ್ಷದ ರಾಜು ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮದ್ಯ ಸೇವಿಸುವ ಚಟ ಹೊಂದಿದ್ದು, ಇದರಿಂದಾಗಿ 6 ತಿಂಗಳ ಹಿಂದೆ ಲಿವರ್ ಹಾಗೂ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದುಕೊಂಡರೂ ಸಂಪೂರ್ಣವಾಗಿ ಗುಣಮುಖವಾಗಿರುವುದಿಲ್ಲ. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ರಾಜು ಅವರು, ನಿನ್ನೆ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮ ಹತ್ಯೆಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.