



ಕಾರ್ಕಳ : ಕುವೆಂಪು ಅವರ ವಿಶ್ವಮಾನವ ದೃಷ್ಠಿಕೋನ ಇಂದು ಜಗತ್ತು ಅನುಸರಿಸಬೇಕಾದ ಮಹಾಧ್ಯೇಯ. ಕನ್ನಡದ ಹೆಸರಾಂತ ವಿಮರ್ಶಕ ಡಾ. ಎಚ್.ಎಸ್.ಸತ್ಯನಾರಾಯಣ ಅವರು ಹೇಳಿದರು. ಅವರು ಶ್ರೀ ಧ.ಮಂ.ಕಾಲೇಜು ಉಜಿರೆ ಕನ್ನಡ ವಿಭಾಗ, ರಾಷ್ಟçಕವಿ ಕುವೆಂಪು ಪ್ರತಿಷ್ಠಾನ(ರಿ) ಕುಪ್ಪಳ್ಳಿ ಹಾಗೂ ಶ್ರೀ ಭುವನೇಂದ್ರ ಕಾಲೇಜಿನ ಸಹಯೋಗದಲ್ಲಿ ನಡೆದ “ಹೊಸತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ” ಎಂಬ ವಿಶೇಷೋಪನ್ಯಾಸಮಾಲಿಕೆಯಲ್ಲಿ ಮಾತನಾಡುತ್ತಿದ್ದ ಅವರು ಕುವೆಂಪು ಅವರು ಬಾಲ್ಯದಿಂದಲೇ ವಿಶಿಷ್ಟ ವೈಚಾರಿಕ ದೃಷ್ಟಿಕೋನ ಹೊಂದಿದವರಾಗಿದ್ದರು. ದೇವರ ಕುರಿತಾದ ಅವರ ನಿಲುವು ಭಿನ್ನವಾದುದಾಗಿತ್ತು. ಪ್ರಕೃತಿಯನ್ನೇ ದೇವರೆಂದು ಪರಿಭಾವಿಸಿದವರಾಗಿದ್ದರು. ಪ್ರಕೃತಿಯೆಂಬ ಮಹಾಶಕ್ತಿಯ ಎದುರು ನಾನು ತೃಣಕ್ಕೆ ಸಮಾನವೆಂದು ಅವರು ಯೋಚಿಸಿದ್ದರು. ಬಾಲ್ಯದಿಂದಲೇ ಅವರ ವೈಚಾರಿಕ ಪ್ರಜ್ಞೆ ಸೂಕ್ಷö್ಮವಾದುದಾಗಿತ್ತು. ಅದರಲ್ಲಿ ಮನುಷ್ಯನ ಕೊರತೆಗಳು ಹೇಗೆ ಪ್ರಕೃತಿಯನ್ನು ವಿನಾಶದ ಅಂಚಿನೆಡೆಗೆ ತಳ್ಳುತ್ತವೆ ಎಂಬುದರ ಸೂಕ್ಷö್ಮತೆಯನ್ನು ಅವರು ಮನಗಂಡರು. ಅವರ ಬದುಕು ಮತ್ತು ಭಾವಗಳು ಸದಾ ಚಿಂತನಶೀಲವಾಗಿದ್ದುವು ಎಂದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ.ಕೋಟ್ಯಾನ್ ಅವರು ಮಾತನಾಡುತ್ತಾ ಕುವೆಂಪು ಅವರ ದಾರ್ಶನಿಕತೆ ಅರ್ಥಮಾಡಿಕೊಂಡು ಬದುಕುವುದು ಇಂದಿನ ಅಗತ್ಯವಾಗಿದೆ. ವರ್ಗ-ವರ್ಣ ವ್ಯತ್ಯಾಸ, ಅನ್ಯಾಯಗಳನ್ನು ಕುವೆಂಪು ಅವರು ಯಾವತ್ತೂ ಸಹಿಸಿಕೊಂಡವರಲ್ಲ. ಎಲ್ಲಾ ರೀತಿಯಲ್ಲೂ ಮಾದರಿಯಾಗಿ ಬದುಕಿದ ಕುವೆಂಪು ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕೆಂದು ಕರೆನೀಡಿದರು. ಶ್ರೀ ಧ.ಮಂ.ಕಾಲೇಜು ಉಜಿರೆ ಕನ್ನಡ ವಿಭಾಗದ ಪ್ರಾಧ್ಯಾಪಕ ಕಾರ್ಯಕ್ರಮ ಸಂಯೋಜಕ ಡಾ.ರಾಜಶೇಖರ ಹಳೆಮನೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ, ಸ್ಥಳೀಯ ಸಂಯೋಜಕ ಡಾ. ಅರುಣಕುಮಾರ ಎಸ್. ಆರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತ್ಯಸಂಘದ ಕಾರ್ಯದರ್ಶಿ ಕು, ಶ್ವೇತಾ ಜೈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ದಯಾನಂದ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.