



ಕುವೈಟ್ ಸಿಟಿ: ಕನ್ನಡ ನಟ ಹಾಗೂ ಸಮಾಜ ಸೇವಕ ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಕಾರ್ಯಗಳನ್ನು ಸ್ಮರಿಸಿ ಗೌರವಿಸುವ ಸಲುವಾಗಿ ಕುವೈಟ್‌ನ ಭಾರತೀಯ ಪ್ರವಾಸಿ ಪರಿಷತ್ (ಬಿಪಿಪಿ) ಕರ್ನಾಟಕ ವಿಭಾಗ ಮತ್ತು ಬಿಡಿಕೆ ಕುವೈಟ್ ಜಂಟಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿತು. ಈ ಶಿಬಿರವನ್ನು ಭಾರತ-ಕುವೈಟ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 60 ನೇ ವಾರ್ಷಿಕೋತ್ಸವ ಮತ್ತು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವನ್ನು ಆಚರಿಸುವ ಸಲುವಾಗಿಯೂ ಆಯೋಜಿಸಲಾಗಿದೆ. ಆದಾನ್ ಕೊಅಪರೇಟಿವ್ ಬ್ಲಡ್ ಟ್ರಾನ್ಸ್‌ಫ್ಯೂಸನ್ ಸೆಂಟರ್‌ನಲ್ಲಿ ಡಿಸೆಂಬರ್ 3 ರಂದು ಮಧ್ಯಾಹ್ನ 1 ರಿಂದ 6 ರವರೆಗೆ ಶಿಬಿರ ನಡೆದಿದ್ದು, ಇದು ಕುವೈಟ್‌ನಲ್ಲಿರುವ ಭಾರತೀಯ ವಲಸಿಗರಿಂದ ಅದ್ಬುತ ಪ್ರತಿಕ್ರಿಯೆಯನ್ನು ಪಡೆದಿದೆ ಮತ್ತು ಸುಮಾರು 125 ದಾನಿಗಳು ರಕ್ತದಾನ ಮಾಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.