



ಉಡುಪಿ,: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸರ್ಕಾರದಿಂದ ಕೈಗೊಳ್ಳಲಾಗುತ್ತಿದ್ದ ಕಾಮಗಾರಿಗಳಿಗೆ ಪಾವತಿಸಲಾಗುತ್ತಿದ್ದ ಕಾರ್ಮಿಕ ಕಲ್ಯಾಣ ಸುಂಕದ ಖಾತೆಯನ್ನು ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಖಜಾನೆ-2 ಮುಖಾಂತರ ಕಾರ್ಮಿಕ ಕಲ್ಯಾಣ ಸುಂಕವನ್ನು ಪಾವತಿ ಮಾಡುವ ಸುಂಕದಾರರು ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಲೆಕ್ಕ ಶೀರ್ಷಿಕೆ 8449-00-120-0-18-660 ರಡಿಯಲ್ಲಿನ ಠೇವಣಿ ಖಾತೆ ಸಂಖ್ಯೆ: 26572ಇ181 ಮತ್ತು ಡಿ.ಡಿ.ಓ ಕೋಡ್ 997480 ಹೆಸರಿನಲ್ಲಿ ತೆರೆದಿರುವ ನೂತನ ಖಾತೆಗೆ ಪಾವತಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.