



ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ನಿತ್ಯ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಡೈರಿ ಸೇರುತ್ತಿದೆ. ಆದರೆ ಇಲ್ಲಿನ ಪಶು ಚಿಕಿತ್ಸಾಲಯಗಳ ಸಿಬ್ಬಂದಿ ಕೊರತೆ ಉಂಟಾಗುತ್ತಿದೆ. ಅದರಲ್ಲಿ ಹೆಬ್ರಿ ತಾಲೂಕು ಪಶುವೈದ್ಯ ಆಸ್ಪತ್ರೆ ವ್ಯಥೆಯಿಂದ ಪಶುಪಾಲನೆ ಮಾಡುತ್ತಿರುವ ಕೃಷಿಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸಿಬ್ಬಂದಿ ಕೊರತೆಯಿಂದ ತಾಲೂಕು ಪಶು ಆಸ್ಪತ್ರೆಯಲ್ಲಿ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ
ಎರಡೇ ಸಿಬ್ಬಂದಿ: ಹೆಬ್ರಿ ತಾಲೂಕು ವೈದ್ಯಕೀಯ ಆಸ್ಪತ್ರೆಯಲ್ಲಿ ಯ ವ್ಯಾಪ್ತಿಗೆ ಒಳಪಡುವ ಸರಕಾರದಿಂದ ಅಂಗೀಕೃತ 31 ಅಧಿಕಾರಿಗಳು ನೇಮಕವಾಗಬೇಕಿತ್ತು. . ಆದರೆ ಅದರಲ್ಲೂ ನಾಲ್ಕು ಅಧಿಕಾರಿಗಳು, ಒಬ್ಬರು ಉನ್ನತ ವ್ಯಾಸಂಗ ಮಾಡುತಿದ್ದು , ಇನ್ನೊಬ್ಬರು ತರಬೇತಿಗೆ ಹೋಗಿರುವುದರಿಂದ, ಕೇವಲ ಇಬ್ಬರೂ ಸಿಬ್ಬಂದಿಗಳಿಂದ ಇಡೀ ತಾಲೂಕು ಪಶುಚಿಕಿತ್ಸೆ ವ್ಯವಸ್ಥೆ ನಡೆಯುತ್ತಿದೆ.
ಖಾಲಿ ಇರುವ ಹುದ್ದೆಗಳು :
ಪಶು ವೈದ್ಯಾಧಿಕಾರಿ 3 ಹುದ್ದೆಗಳು, . ಪಶು ವೈದ್ಯಕೀಯ ಪರೀಕ್ಷಕರು 3, ಕಿರಿಯ ಪಶು ವೈದ್ಯಕೀಯ ಪರೀಕ್ಷಕರು 4,ಅಟೆಂಡರ್ 13 ಪೋಸ್ಟ್ ಗಳು ಖಾಲಿ ಇವೆ. 31 ಅಧಿಕಾರಿಗಳನ್ನು ನೇಮಕವಾಗಬೇಕಾಗಿದೆ. ಇದರಲ್ಲಿ ಐದು ಜನರನ್ನು ಗುತ್ತಿಗೆ ಮೇಲೆ ನೇಮಿಸಿಕೊಳ್ಳಲಾಗಿದೆ. ಖಾಲಿ ಹುದ್ದೆಗಳ 31ರಲ್ಲಿ ಖಾಯಂ ಆಗಿ ಮುಖ್ಯ ಪಶು ವೈದ್ಯ ಅಧಿಕಾರಿ ಹಾಗೂ ಇನ್ನೊಬ್ಬ ಸಿಬ್ಬಂದಿ ಮಾತ್ರ ಕಾರ್ಯಾಚರಿಸುತಿದ್ದಾರೆ.
ತುರ್ತು ಸೇವೆ ನೀಡುವಲ್ಲಿ ವಿಫಲತೆ : ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ 22000 ಪಶುಗಳಿವೆ. ಅದಕ್ಕಾಗಿ ಒಂದು ಪಶು ಆಸ್ಪತ್ರೆ, ಮೂರು ಪಶು ಚಿಕಿತ್ಸಾಲಯ, ಐದು ಪ್ರಾಥಮಿಕ ಪಶು ಚಿಕಿತ್ಸೆ ಕೇಂದ್ರಗಳಿವೆ .ಆದರೆ ಸಿಬ್ಬಂದಿಗಳ ಕೊರತೆಯಿಂದ ಯಾವುದೇ ರೀತಿಯ ತುರ್ತು ಸೇವೆ ನೀಡಲು ಕಷ್ಠಕರವಾಗುತ್ತಿದೆ. ಸಿಬ್ಬಂದಿಗಳ ಕೊರತೆಯಿಂದ ತುರ್ತು ಸೇವೆಗಳು ನೀಡುವಲ್ಲಿ ವಿಫಲವಾಗಿದೆ.
ಇಬ್ಬರು ಅಧಿಕಾರಿಗಳಿಗೆ ಹೆಚ್ಚಿದ ಜವಾಬ್ದಾರಿ: ತಾಲೂಕು ವ್ಯಾಪ್ತಿಯಲ್ಲಿ ಗ್ರಾಮಗಳ ಜಮಾಬಂಧಿ ಗಳು, ಅಧಿಕಾರಿ ಗಳ ಮೀಟಿಂಗ್ ಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಇದರ ನಡುವೆ ಪಶು ಗಳಿಗೆ , ಚಿಕಿತ್ಸೆ ನೀಡಲು ಪರದಾಡಬೇಕು. ಸಾಂಕ್ರಾಮಿಕವಾಗಿ ಹರಡಿದ ಚರ್ಮಗಂಟು ರೋಗದ ಸಂದರ್ಭದಲ್ಲಿ ಹಗಲಿರುಳೆನ್ನದೆ ಪಶು ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದರು..ಆದರೆ ಕೆಲವೆಡೆಗಳಲ್ಲಿ ಸಕಾಲದಲ್ಲಿ ಸಮರ್ಪಕವಾಗಿ ತುರ್ತು ಸೇವೆ ಸಿಗದೆ ಪಶುಗಳು ಸಾವನ್ನಪ್ಪಿವೆ.
ಸಂಚರಿಸದ ಪಶು ಸಂಜೀವಿನಿ ಆಂಬುಲೆನ್ಸ್ :ಹ ಸರಕಾರವು ಪಶುಗಳ ಆರೋಗ್ಯ ಸೇವೆಯನ್ನು ಉತ್ತಮ ಗೊಳಿಸಲು ಪಶು ಸಂಜೀವಿನಿ ಸಂಚಾರಿ ಆಂಬುಲೆನ್ಸ್ ಸೇವೆ ಪರಿಚಯಿಸಿತ್ತು ಆದರೆ ಈ ಅಂಬುಲೆನ್ಸ್ ನಿರ್ವಹಣೆ ಮಾಡಲು ಸಿಬ್ಬಂದಿಗಳೆ ಇಲ್ಲ.
ಜಿಲ್ಲೆಯಲ್ಲೇ ಸಿಬ್ಬಂದಿ ಕೊರತೆ:ಉಡುಪಿಜಿಲ್ಲೆಯಲ್ಲಿ ಏಳು ತಾಲೂಕುಗಳಲ್ಲಿ ಒಟ್ಟು 2, 28, 892 ಪಶುಗಳಿದ್ದು ಅದರಲ್ಲಿ 357 ಅಂಗಿಕೃತ ಹುದ್ದೆಗಳಿವೆ.ಅದರಲ್ಲಿ ಕೇವಲ 69 ಹುದ್ದೆಗಳಲ್ಲಿ ಮಾತ್ರ ಅಧಿಕಾರಿಗಳು ಕಾರ್ಯನಿರ್ವಹಿಸುತಿದ್ದಾರೆ. ಉಪ ನಿರ್ದೇಶಕರು ಪಾಲಿ ಕ್ಲಿನಿಕ್ 1 , ಪಶು ವೈದ್ಯಾಧಿಕಾರಿಗಳು 32 , ಜಾನುವಾರು ಅಧಿಕಾರಿಗಳು 7, ವೈದ್ಯ ಪರೀಕ್ಷಕರು 60, ಅಟೆಂಡರ್ 141, ಲ್ಯಾಬ್ ಟೆಕ್ನಿಷಿಯನ್ 1 288 ಸಿಬ್ಬಂದಿಗಳು ಇರಬೇಕಿತ್ತು.
.
ಜಿಲ್ಲೆಯಲ್ಲಿ 18 ವಿಭಾಗಗಳಲ್ಲಿ 357 ಜನ ನೌಕರರು ಕಾರ್ಯನಿರ್ವಹಿಸಬೇಕಿತ್ತು ಆದರೆ ನೇಮಕವಾದ್ದೆ 69. . ಹೆಬ್ರಿ ತಾಲುಕು ವ್ಯಾಪ್ತಿಯಲ್ಲಿ ಇಬ್ಬರು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತಿದ್ದಾರೆ.
ಡಾ. ಸಂದೀಪ್ ಕುಮಾರ್ ಶೆಟ್ಟಿ ಮುಖ್ಯ ಪಶುವೈದ್ಯಾಧಿಕಾರಿ, ಉಪ ನಿರ್ದೇಶಕರ ಕಛೇರಿ, ಪಶುಪಾಲನೆ ಇಲಾಖೆ ಉಡುಪಿ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.