logo
WhatsApp Image 2026-04-02 at 14.46.04.jpeg
hindalco everlast.jpeg

ಲೇಡಿಗೋಷನ್ ಮಹಾ ಎಡವಟ್ಟು.. ಮಗು ಅದಲುಬದಲು ಶಂಕೆ: ಪೋಷಕರ ಆರೋಪ

ಟ್ರೆಂಡಿಂಗ್
share whatsappshare facebookshare telegram
15 Oct 2021
post image

ಮಂಗಳೂರು : ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ತಾಯಿಗೆ ಗಂಡು ಮಗು ನೀಡಿ ಸಾಗ ಹಾಕಿದ್ದ ಲೇಡಿಗೋಶನ್ ಸರಕಾರಿ ಹೆರಿಗೆ ಆಸ್ಪತ್ರೆಯ ಮಹಾ ಎಡವಟ್ಟು ಬಯಲಾಗಿದ್ದು. ಆಸ್ಪತ್ರೆಯ ಪೋಷಕರು ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಿನ್ನೆ ನಡೆದಿದೆ.

ಕುಂದಾಪುರ ಮೂಲದ ಅಮ್ರಿನ್ ಎಂಬವರು ಸೆಪ್ಟಂಬರ್ 27 ರಂದು ಹೆರಿಗೆಗಾಗಿ ದಾಖಲಾಗಿದ್ದು, ತಡರಾತ್ರಿ 12 ಗಂಟೆ ಹೆರಿಗೆ ಆಗಿದ್ದು,ಆಸ್ಪತ್ರೆ ದಾಖಲಾತಿ ಪ್ರಕಾರ ಮಗುವನ್ನು ‘ಹೆಣ್ಣು’ ಎಂಬುದಾಗಿ ನಮೂದಿಸಿದ್ದು ವಿಚಾರ ಬೆಳಕಿಗೆ ಬಂದಿದೆ.

ಪೋಷಕರು ಮಗು ಹಾಗೂ ತಾಯಿಯನ್ನು ಡಿಸ್ಚಾರ್ಜ್ ಮಾಡುವಂತೆ ತಿಳಿಸಿದ್ದು, ಮಗುವಿಗೆ ಮಲ ವಿಸರ್ಜನೆ ಸಮಸ್ಯೆ ಇರುವುದಾಗಿ ಲೇಡಿಗೋಶನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ತಕ್ಷಣವೇ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಅಮ್ಬ್ರೀನ್ ಪತಿ ಮುಸ್ತಫಾ ನಿರ್ಧರಿಸಿದ್ದಾರೆ. ಅಂತೆಯೇ,‌ ಬ್ರಹ್ಮಾವರಕ್ಕೆ ಕೊಂಡೊಯ್ಯಲಾಗಿದ್ದು ಅಲ್ಲಿ ಮಗು ಬದಲಾಯಿಸಿ ಕೊಟ್ಟಿರುವ ವಿಚಾರ ಬಯಲಾಗಿದೆ. ಸ್ಥಳಕ್ಕೆ ಆಗಮಿಸಿದ ಬಂದರು ಪೊಲೀಸರು ಘಟನೆ ಕುರಿತು ಪರಿಶೀಲಿಸಿದ್ದಾರೆ. ಮಗುವಿನ DNA ಪರೀಕ್ಷೆ ನಡೆಸಿ ನ್ಯಾಯ ಒದಗಿಸುವಂತೆ ಪಟ್ಟು ಹಿಡಿದಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.