



ರುದ್ರಪ್ರಯಾಗ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಚೌಕಿ ಫಾಟಾದ ತರ್ಸಾಲಿ ಎಂಬಲ್ಲಿ ಭೂಕುಸಿತ ಸಂಭವಿಸಿ ಐವರು ಯಾತ್ರಿಕರು ಸಾವನ್ನಪ್ಪಿದ್ದಾರೆ.
ಬಂಡೆಗಳೊಂದಿಗೆ ಗುಡ್ಡದಿಂದ ಭಾರೀ ಮಣ್ಣು ಕುಸಿದು ಬಿದ್ದಿದ್ದರಿಂದ ಕೇದಾರನಾಥ ಹೆದ್ದಾರಿಯ 60 ಮೀಟರ್ ಭಾಗವು ಕುಸಿದಿದೆ. ಶುಕ್ರವಾರ ಅವಶೇಷಗಳಡಿಯಲ್ಲಿ ಹೂತುಹೋಗಿದ್ದ ವಾಹನವೊಂದು ಪತ್ತೆಯಾಗಿದ್ದು, ಅದರಲ್ಲಿ ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರಲ್ಲಿ ಒಬ್ಬರು ಗುಜರಾತ್ ನಿವಾಸಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದ ಕೇದಾರನಾಥ ಧಾಮಕ್ಕೆ ಹೋಗುವ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯಲ್ಲಿ ಬ್ಲಾಕ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಯ ಸುಮಾರು 60 ಮೀಟರ್ ಕೊಚ್ಚಿಹೋಗಿದೆ. ತಗ್ಗು ಪ್ರದೇಶದಲ್ಲಿರುವ ಚೌಕಿ ಜವಾಡಿ, ಕೊತ್ವಾಲಿ ರುದ್ರಪ್ರಯಾಗ, ಚೌಕಿ ತಿಲವಾಡ, ಠಾಣಾ ಅಗಸ್ತ್ಯಮುನಿ, ಕಾಕಡಗಡದಲ್ಲಿ ಜನರು ಮತ್ತು ಪ್ರಯಾಣಿಕರು ತೊಂದರೆಗೆ ಒಳಾಗಾಗಿದ್ದಾರೆ ಎಂದು ರುದ್ರಪ್ರಯಾಗ ಪೊಲೀಸರು ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.