logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಬೆಳುವಾಯಿ ಪಂಡಿಂಜೆ ಗುತ್ತು ಲಕ್ಷ್ಮಣ್ ಡಿ. ಶೆಟ್ಟಿ ಮತ್ತು ದೇವಕಿ ಎಲ್. ಶೆಟ್ಟಿ ಸಭಾಂಗಣ ಉದ್ಘಾಟನೆ

ಟ್ರೆಂಡಿಂಗ್
share whatsappshare facebookshare telegram
9 Nov 2021
post image

ಬೆಳುವಾಯಿ ಪಂಡಿಂಜೆ ಗುತ್ತು ಲಕ್ಷ್ಮಣ್ ಡಿ. ಶೆಟ್ಟಿ ಮತ್ತು ದೇವಕಿ ಎಲ್. ಶೆಟ್ಟಿ ಸಭಾಂಗಣ ಉದ್ಘಾಟನೆ

 

ಮೂಡುಬಿದರೆ(reporterkarnataka.com):

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಸ್ಕೌಟ್ಸ್ ಮತ್ತು ಕನ್ನಡ ಭವನದ ಮೊದಲನೆಯ ಮಹಡಿಯಲ್ಲಿ ಬೆಳುವಾಯಿ ಪಂಡಿಂಜೆ ಗುತ್ತು ಲಕ್ಷ್ಮಣ್ ಡಿ. ಶೆಟ್ಟಿ ಮತ್ತು ದೇವಕಿ ಎಲ್. ಶೆಟ್ಟಿ ಸಭಾಂಗಣವನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಪ್ರಾಸ್ತಾವಿಕವಾಗಿ ಸ್ಕೌಟ್ಸ್ ಆ್ಯಂಡ್ ಕನ್ನಡ ಭವನ ಸಮಿತಿಯ ಮುಖ್ಯಸ್ಥರು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ ಆಳ್ವ ಮಾತನಾಡಿ, ಮೂರು ಅಂತಸ್ತಿನ ಈ ಕಟ್ಟಡವು ಸುಸಜ್ಜಿತ ಆಧುನಿಕ ಸೌಲಭ್ಯವುಳ್ಳ ಕಟ್ಟಡವಾಗಿದ್ದು ಎಲ್ಲಾ ಮತ ಪಂಗಡದ ಸಾರ್ವಜನಿಕರು ಇದನ್ನು ಸಾಂಸ್ಕೃತಿಕ, ಧಾರ್ಮಿಕ, ಜಾನಪದ, ಕ್ರೀಡೆ ಸೇರಿದಂತೆ ಮದುವೆ ಮುಂಜಿ ಸಮಾರಂಭಗಳಿಗೆ ಉಪಯೋಗಿಸಲು ಅವಕಾಶವಿದೆ ಎಂದರು. 

ಈ ಸ್ಕೌಟ್ಸ್ ಮತ್ತು ಕನ್ನಡ ಭವನದಲ್ಲಿ ತಲಾ ಒಂದು ಸಾವಿರ ಆಸನ, 500 ಆಸನ, ಹಾಗೂ 250 ಆಸನಗಳ ಸಭಾಂಗಣಗಳು ಲಭ್ಯವಿದೆ.

ಸುಸಜ್ಜಿತವಾದ ಆಹಾರ ತಯಾರಿಕಾ ಘಟಕ ಹೊಂದಿದೆ. ಇದನ್ನು ಸಾರ್ವಜನಿಕರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಉಪಯೋಗಿಸಲು ಮುಕ್ತ ಅವಕಾಶವಿದೆ ಎಂದು ಅವರು ನುಡಿದರು.

ಸಮಾರಂಭದಲ್ಲಿ ಮೂಡುಬಿದರೆ ಜೈನ ಮಠದ

 ಪದ್ಮವಿಭೂಷಣ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ

 ಆಶೀರ್ವಚನ ಮತ್ತು ಶುಭ ಸಂದೇಶವನ್ನು ನೀಡಿದರು.

ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಾಚನದಲ್ಲಿ ತಂದೆ-ತಾಯಿ ಮತ್ತು ಮಕ್ಕಳ ಬಾಂಧವ್ಯದ ಬಗ್ಗೆ ಮಾತನಾಡುತ್ತಾ ಲಕ್ಷ್ಮಣ ಶೆಟ್ಟಿ ಮತ್ತು ದೇವತೆ ಶೆಟ್ಟಿ ಅವರ ಮಕ್ಕಳು ನಮಗೆಲ್ಲರಿಗೂ ಮಾದರಿ ಎಂದರು.

ವೇದಿಕೆಯಲ್ಲಿ ಪದ್ಮವಿಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಅಭಯಚಂದ್ರ ಜೈನ್, ಶಾಸಕ ಉಮಾನಾಥ ಕೋಟ್ಯಾನ್, ಶ್ರೀಪತಿ ಭಟ್, ಪಂಡಿಂಜೆ ಗುತ್ತು ಲಕ್ಷ್ಮಣ ಶೆಟ್ಟರ  ಮಕ್ಕಳು ಸೊಸೆಯಂದಿರು ಉಪಸ್ಥಿತರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.