


ಕಾರ್ಕಳ : “ಕಳೆದೆರಡು ವರ್ಷಗಳಿಂದ ಕೋವಿಡ್ ಸೋಂಕಿನಿAದ ಅಸ್ವಸ್ಥಗೊಂಡು ಮಾನವಕುಲ ತುಂಬಾ ನೊಂದಿದೆ. ಈ ಮಹಾಮಾರಿಗೆ ನಮ್ಮದೇ ಕುಟುಂಬದ ಪ್ರೀತಿಪಾತ್ರರು ಬಲಿಯಾಗಿದ್ದಾರೆ. ಇನ್ನೂ ಅನೇಕರು ಈ ಸೋಂಕಿನಿAದ ನರಳುತ್ತಿದ್ದಾರೆ. ಅಸ್ವಸ್ಥರ ಆರೈಕೆಯಲ್ಲಿ ಸವೆಸಿದ ನಮ್ಮ ಜೀವನ ದೇವರಿಂದ ಆಶೀರ್ವದಿತವಾಗುತ್ತದೆ” ಎಂದು ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಹೆನ್ರಿ ಡಿ’ಸೋಜಾರವರು ಪ್ರಬೋಧನೆ ನೀಡಿದರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಮೂರನೇ ದಿನ ಮಂಗಳವಾರದAದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಫೆಬ್ರವರಿ ೨೦ ರಂದು ಆರಂಭಗೊAಡ ವಾರ್ಷಿಕ ಮಹೋತ್ಸವವು ಮೂರನೇ ದಿನವಾದ ಮಂಗಳವಾರದAದು ಅಸ್ವಸ್ಥರಿಗಾಗಿ ವಿಶೇಷವಾಗಿ ಪೂಜೆ ಪ್ರಾರ್ಥನೆಗಳ್ನು ನೆರವೇರಿಸಲಾಯಿತು. ಅಸ್ವಸ್ಥರನ್ನು ಹೊತ್ತ ವಾಹನಗಳನ್ನು ಪುಣ್ಯಕ್ಷೇತ್ರದ ಆವರಣಕ್ಕೆ ಬರಲು ಅವಕಾಶ ನೀಡಲಾಗಿತ್ತು. ಗುರುಗಳು ಮತ್ತು ಸೇವಾದರ್ಶಿಗಳು ಅಸ್ವಸ್ಥರ ಬಳಿಗೇ ಹೋಗಿ ಅವರಿಗೆ ಪವಿತ್ರ ಪರಮ ಪ್ರಸಾದವನ್ನು ವಿತರಿಸಿದರು. ದಿನದ ಏಕೈಕ ಪ್ರಮುಖ ಬಲಿಪೂಜೆಯನ್ನು ಬಳ್ಳಾರಿಯ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಹೆನ್ರಿ ಡಿ’ಸೋಜಾರವರು ನೆರವೇರಿಸಿದರು. ದಿನದ ಬಲಿಪೂಜೆಗಳನ್ನು ವಂದನೀಯ ಫ್ರಾನ್ಸಿಸ್ ಕರ್ನೆಲಿಯೊ, ತೊಟ್ಟಾಂ; ವಂದನೀಯ ಕೆನ್ಯೂಟ್ ಬಾರ್ಬೊಜಾ, ಕಂಡ್ಲೂರು; ವಂದನೀಯ ರೆಜಿನಾಲ್ಡ್ ಪಿಂಟೊ, ಉಡುಪಿ; ವಂದನೀಯ ಸಿಲ್ವೆಸ್ಟರ್ ಡಿ’ಕೋಸ್ಟಾ, ಮುಲ್ಕಿ ಇವರು ನೆರವೇರಿಸಿದರು. ವಂದನೀಯ ಲುವಿಸ್ ಡೇಸಾ, ಮುಕಮಾರು ಇವರು ನೆರವೇರಿಸಿದ ದಿನದ ಅಂತಿಮ ಬಲಿಪೂಜೆಯೊಡನೆ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮಗಳು ಸಂಪನ್ನಗೊAಡವು. ಮಹೋತ್ಸವದ ನಾಲ್ಕನೇ ದಿನ ಬುಧವಾರ ಬೆಳಿಗ್ಗೆ ೮, ೧೦, ೧೨ ಹಾಗೂ ಮಧ್ಯಾಹ್ನ ೨, ೪ ಮತ್ತು ೭ ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಬೆಳಗ್ಗಿನ ೧೨ ಗಂಟೆಯ ಬಲಿಪೂಜೆ ಕನ್ನಡ ಭಾಷೆಯಲ್ಲೂ, ೧೦ ಗಂಟೆಯ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಆಲೋಶಿಯಸ್ ಪಾವ್ಲ್ ಡಿಸೋಜಾರವರು ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ. ಮಹೋತ್ಸವದ ನಾಲ್ಕನೇ ದಿನವು ಎಲ್ಲಾ ಕುಟುಂಬಗಳಿಗಾಗಿ ಪ್ರಾರ್ಥಿಸಲು ಮೀಸಲಾಗಿಡಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.