



ಕಾರ್ಕಳ : ಹಿರಿಯರು ಕಾರ್ಕಳವನ್ನು ಕಲೆ, ಶಿಲ್ಪಕಲೆ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ್ದರು, ಕಾರ್ಕಳ ಉತ್ಸವ ಸಂಸÀ್ಕೃತಿಯ ಬಿಂಬಿಸುವ ಆಯಾಮವಾಗಿದ್ದು ಕಾರ್ಕಳದ ಸಂಸ್ಕೃತಿ ಎಲ್ಲೆಡೆ ದೇಶ, ವಿದೇಶದಲ್ಲೂ ಪಸರಿಸಲಿ ,ಕಾರ್ಕಳ ಮತ್ತಷ್ಟು ಪ್ರವಾಸಿತಾಣವಾಗಲಿ, ಎಂದು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಹೇಳಿದರು. ಕಾರ್ಕಳ ಸ್ವರಾಜ್ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವದ ಮುಖ್ಯ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವ ಸುನೀಲ್ ಕುಮಾರ್ ಮಾತನಾಡಿ , ಸರಕಾರದ ಮರ‍್ಗಸೂಚಿಗಳನ್ನು ಪಾಲಿಸಿ ಕರೋನವನ್ನು ಹೊಡೆದೋಡಿಸಬೇಕು ,ಅದರಂತೆಯೆ ಕಾರ್ಕಳ ಉತ್ಸವವನ್ನು ಆಚರಿಸೋಣ , ಎಂದರು
ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ , ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಉಪಸ್ಥಿತರಿದ್ದರು.ಪ್ರವೀಣ್ ಸಾಲ್ಯಾನ್ ಸ್ವಾಗತಿಸಿ, ಸುಮಾ ರವಿಕಾಂತ್ ಪ್ರಾರ್ಥಿಸಿ, ಯೋಗೀಶ್ ಕಿಣಿ ಪ್ರಾರ್ಥಿಸಿದರು. ಜ್ಯೋತಿ ರಮೇಶ್ ನಿರೂಪಿಸಿ, ರಾಜಾರಾಂ ಶೆಟ್ಟಿ ವಂದಿಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.